ಪುರಂದರದಾಸರು
ಹರಿ ಭಕುತಿ ಸುಖವು ಅನುಭವಿಗಲ್ಲದೆ ಮಿಕ್ಕ - |ನರಗುರಿಗಳದರ ಸ್ವಾದವ ಬಲ್ಲವೆ ? ಪ.
ಎಸೆವ ತಂಗಿನಕಾಯ ಎತ್ತು ಮೆಲುಬಲ್ಲುದೆ ?ರಸಭರಿತ ಖರ್ಜೂರ ಕುರಿ ಮೆಲ್ಲಬಲ್ಲುದೆ ? ||ಹಸು ಕರೆದ ಪಾಲ ಸವಿಸುಖಿಗಳಿಗೆ ಅಲ್ಲದೆ |ಕಸದಿ ವಸಿಸುವ ಉಣ್ಣೆಗಳು ಬಲ್ಲವೆ ? 1
ಸರಸಿಜದ ಪರಿಮಳವ ಮಧುಕರನು ಅರಿವಂತೆ |ನಿರುತ ಬಳಿಯೊಳಗಿರುವ ಕಷ್ಟಗಳು ಬಲ್ಲುವೆ ? |ಸರಸ ಪಂಚಾಮೃತವಶ್ವಾನ ತಾ ಬಲ್ಲುವೆ ? |ಹರಿಕಥಾ ಶ್ರವಣಸುಖ ಕತ್ತಯದು ಬಲ್ಲುದೆ ? 2
ಅಂಧ ದೀಪದ ಬೆಳಕ ಮೂಢ ಮಾತಿನ ಸವಿಯ |ಮಂದ ಬದಿರನು ಹಾಡಕೇಳಿ ಸುಖಿಸುವರೆ ? ||ಅಂದ ಮುತ್ತಿನ ದಂಡೆ ಕಪಿಗಳಿಡಬಲ್ಲುವೆ ? |ಮಂದಮತಿ ಪುರಂದರವಿಠಲನನು ಬಲ್ಲನೆ ? 3
************