ಎಂದು ಕಾಂಬೆನು ನಂದ ಗೋಪನ | ಕಂದ ಶ್ರೀ ಗೋವಿಂದನ
ಮಂದರಾಚಲಧರ ಶ್ರೀಯದುಕುಲ | ಚಂದ್ರಗುಣಸಾಂದ್ರ
ವಿಜಯಸೂತನ ವಿಶ್ವಪಾಲನ | ಭುಜಗವರ ಪರಿಯಂಕನ
ರಜನಿಚರರಳಿದ ಜನ ಜನಕನ | ಶ್ರೀ ಜಗಪತಿ ದ್ವಿಜವರಗಮನನ 1
ಪಾಲುದಧಿ ನವನೀತ ಚೋರನ ಬಾಲಕೃಷ್ಣ ಗೋಪಾಲನ
ಶೈಲ ಬೆರಳಿಲಿ ತಾಳಿ ಗೋಕುಲ ಪಾಲಿಸಿದ ಪರಮಾತ್ಮನ2
ಭಾಮೆ ರುಕ್ಮಿಣಿ ರಮಣ ರಂಗನ ಸಾಮಗಾನ ವಿಲೋಲನ
ಶ್ರೀಮದಾನಂದ ಮುನಿಕರಾರ್ಚಿತ ಶಾಮಸುಂದರ ವಿಠಲನ 3
***