Sunday, 5 December 2021

ಎಂದು ಕಾಂಬೆನು ನಂದ ಗೋಪನ ಕಂದ ಶ್ರೀ ಗೋವಿಂದನ ankita shyamasundara ENDU KAAMBENU NANDA GOPANA KANDA SRI GOVINDANA




ಎಂದು ಕಾಂಬೆನು ನಂದ ಗೋಪನ | ಕಂದ ಶ್ರೀ ಗೋವಿಂದನ


ಮಂದರಾಚಲಧರ ಶ್ರೀಯದುಕುಲ | ಚಂದ್ರಗುಣಸಾಂದ್ರ


ವಿಜಯಸೂತನ ವಿಶ್ವಪಾಲನ | ಭುಜಗವರ ಪರಿಯಂಕನ

ರಜನಿಚರರಳಿದ ಜನ ಜನಕನ | ಶ್ರೀ ಜಗಪತಿ ದ್ವಿಜವರಗಮನನ 1


ಪಾಲುದಧಿ ನವನೀತ ಚೋರನ ಬಾಲಕೃಷ್ಣ ಗೋಪಾಲನ

ಶೈಲ ಬೆರಳಿಲಿ ತಾಳಿ ಗೋಕುಲ ಪಾಲಿಸಿದ ಪರಮಾತ್ಮನ2


ಭಾಮೆ ರುಕ್ಮಿಣಿ ರಮಣ ರಂಗನ ಸಾಮಗಾನ ವಿಲೋಲನ

ಶ್ರೀಮದಾನಂದ ಮುನಿಕರಾರ್ಚಿತ ಶಾಮಸುಂದರ ವಿಠಲನ 3

***


No comments:

Post a Comment