Showing posts with label ಇಂದು ನೋಡಿದೆ ನಂದಕರ ಯೋಗೀಂದ್ರ ವಂದಿತ ಚರಣನಾ gurujagannatha vittala. Show all posts
Showing posts with label ಇಂದು ನೋಡಿದೆ ನಂದಕರ ಯೋಗೀಂದ್ರ ವಂದಿತ ಚರಣನಾ gurujagannatha vittala. Show all posts

Wednesday, 1 September 2021

ಇಂದು ನೋಡಿದೆ ನಂದಕರ ಯೋಗೀಂದ್ರ ವಂದಿತ ಚರಣನಾ ankita gurujagannatha vittala

 ..

ಇಂದು ನೋಡಿದೆ ನಂದಕರ ಯೋ-

ಗೀಂದ್ರ ವಂದಿತ ಚರಣನಾ ಪ


ವಂದನೀಯ ಶುಭೋರು ಗುಣ ಗಣ

ಸಾಂದ್ರಗುರುರಾಘವೇಂದ್ರನಾ ಅ.ಪ


ವೇದತತಿ ಶತಮೋದಗಿತ್ತ(ನ) - ಆದಿ ಮತ್ಸ್ಯನ ತೆರದಲಿ

ವೇದವಾದವ ಶೋಧಮಾಡಿ ಮೇದಿನೀಸುರಗಿತ್ತನಾ 1


ಕಮಠರೂಪದಲಮರ - ತತಿಗೆ

ಅಮೃತ ನೀಡಿದ - ತೆರದಲಿ

ಸ್ವಮತ ಸುಧೆಯನು ಪ್ರಮಿತಗಿತ್ತಿಹ

ಅಮಿತ ಸುಮಹಾಮಹಿಮನ 2


ಧರಣಿಮಂಡಲ ಧುರುದಿ ದಾಡಿಲಿ

ಧರಿಸಿ ತಂದನ ತೆರದಲಿ

ಧರಣಿ - ಜನರಿಗೆ ಧರೆಯ ಮೊದಲಾದ

ಪರಮಭೀಷ್ಟೆಯನಿತ್ತು ಪೊರೆವನ 3


ದುರುಳದಿತಿಜನ ತರಿದು ನಿಜಪದÀ -

ತರುಳಪಾಲನ ತೆರದಲಿ

ದುರಿತರಾಶಿಯ ತರಿದು ತನ್ನಯ ಶರಣಜನಪರಿಪಾಲನ 4


ಬಲಿಯ ಯಙ್ಞದÀ ಸ್ಥಳದಿ ಭೂಮಿಯ ನಳೆದರೂಪನÀತೆರದಲಿ

ಖಳರ ವಂಚಕÀ ತನ್ನ ತಿಳಿವಗೆ ಸುಲಭದಿಂದಲಿ ಒಲಿವನ 5


ದುಷ್ಟಕ್ಷಿತ್ರಿಯರಷ್ಟು ಕುಲವನು ಸುಟ್ಟು ಬಿಟ್ಟನತೆರದಲಿ

ಕೆಟ್ಟರೋಗವು ಶ್ರೇಷ್ಠಭೂತದ ಅಟ್ಟುಳಿಯನೆ ಕಳೆವನ 6


ಜನಕನಾಜ್ಞದಿ ವನವ ಚರಿಸಿದ

ಇನಕುಲೇಶನ ತೆರದಲಿ

ಜನರಿಗೀಪ್ಸಿತ ತನಯ ಮೊದಲಾದ

ಮನದಪೇಕ್ಷೆಯ ನೀಡೊನ 7


ಕನಲಿ ದ್ರೌಪದಿ ನೆನೆಸಲಾಕೆಯ

ಕ್ಷಣಕೆ ಬಂದನ ತೆರದಲಿ

ಮನದಿ ತನ್ನನು ನೆನೆವ ಜನರನು

ಜನುಮ ಜನುಮದಿ ಪೊರೆವನ 8


ಮುದ್ದು ಸತಿಯರ ಬುದ್ಧಿ ಕೆಡಿಸಿ(ದ)

ಗೆದ್ದು - ಬಂದನ ತೆರದಲಿ

ಮದ್ದು ಮತಿಯನು ತಿದ್ದಿ ಭಕುತಗೆ

ಶುದ್ಧ ಜ್ಞಾನವ ನೀಡೊನ 9


ಕಲಹ ಕಂಟಕ ಕಲಿಯವೈರಿ

ಕಲಿಕಿರೂಪನ ತೆರದಲಿ

ಹುಳುಕು ಮನವನು ಕಳೆದು ತನ್ನಲಿ

ಹೊಳೆವ ಮನವನು ಕೊಡುವನಾ 10


ನೀತ ಗುರುಜಗನ್ನಾಥ ವಿಠಲ ಭೂತಳಕ್ಕಧಿನಾಥನು

ಆತನಂತ್ಯತಿನಾಥ ಜಗಕೆ ಪ್ರೀತಿಶುಭಫಲದಾತನ 11

***