Showing posts with label ಕಾಯೆ ಕರುಣಾಂಬುಧಿಯೇ ಇಂದಿರಾದೇವಿ vijaya vittala KAAYE KARUNAAMBUDHIYE INDIRADEVI. Show all posts
Showing posts with label ಕಾಯೆ ಕರುಣಾಂಬುಧಿಯೇ ಇಂದಿರಾದೇವಿ vijaya vittala KAAYE KARUNAAMBUDHIYE INDIRADEVI. Show all posts

Wednesday, 16 October 2019

ಕಾಯೆ ಕರುಣಾಂಬುಧಿಯೇ ಇಂದಿರಾದೇವಿ ankita vijaya vittala KAAYE KARUNAAMBUDHIYE INDIRADEVI

 ರಾಗ ತೋಡಿ   ಆದಿತಾಳ 
Audio by Mrs. Nandini Sripad

ಶ್ರೀ ವಿಜಯದಾಸರ ಕೃತಿ 


ಕಾಯೆ ಕರುಣಾಂಬುಧಿಯೇ ಇಂದಿರಾದೇವಿ ॥ ಪ ॥

ಕಾಯೆ ಕರುಣಾಂಬುಧಿಯೆ ಮಾಯೆ ನಾರಾಯಣ - । 
ಜಾಯೆ ಸತತ ಜ್ಞಾನವೀಯೆ ಭಕ್ತರ ಪ್ರೀಯೇ ॥ ಅ ಪ ॥

ಕನ್ಯಾಮಣಿಯೆ ಕಾಮಿನಿ ಮಂಗಳವಾಣಿ ।
ಸನ್ನುತೆ ಲೋಕಜನನಿ ।
ನಿನ್ನ ಚರಣಯುಗ್ಮವನ್ನು ನಂಬಿದೆ ಸುಪ್ರ - ।
ಸನ್ನೆ ಸರ್ವಜೀವ ಭಿನ್ನೆ ಭಾಗ್ಯಸಂಪನ್ನೆ ॥
ಮನ್ನಿಸು ದಯದಿ ನೀ ಬಿನ್ನಪ ಲಾಲಿಸಿ ।
ಚನ್ನೆ ಚಕ್ರ ಪಾಂಚಜನ್ಯ ವಿರಾಜಿತೆ ॥ 1 ॥

ಅತಿದಯವಂತೆ ನೀನೆಂದು ಬೇಗದಿ ಬಂದು ।
ತುತಿಸುವೆ ದೀನ ನಾನೆಂದು ।
ಪತಿತರೊಳಿಡದಲೆ ಗತಿಗೆ ಸಮ್ಮತಳಾಗು - ।
ತ್ಪತ್ತಿ ಸ್ಥಿತಿಲಯಕರ್ತೆ ಅತುಳ ಶೋಭನಮೂರ್ತೆ ॥
ಪತಿಯಲಿ ಜನಿಸಿ ನೀ ಪತಿಗೆ ಸತಿಯಾದೆ ।
ಪತಿಯ ಸಂಗಡ ಧ್ಯಾನಿತಳಾದ ಚರಿತೆ ॥ 2 ॥

ಕುಂಕುಮಾಂಕಿತೆ ರಾಜಿತೆ ನಿಗಮಗೀತೆ ।
ಪಂಕಜಾಸನ ಮಾತೆ ।
ಲೆಂಕವತ್ಸಲೆ ಸರ್ವಾಲಂಕಾರಮಯೆ ರವಿ - ।
ಸಂಕಾಶೆ ಬಹುಕಾಲ ಸಂಕಟವಿನಾಶೆ ॥
ಮಂಕುಮತಿಹರ ವಿಜಯವಿಠ್ಠಲನ 
ಸಂಕಲ್ಪಕೆ ಕಳಂಕ ಬಾರದಂತೆ ॥ 3 ॥
***

Kaye karunambudhiye |
Imdiradevi kaye karunambudhiye ||pa||

Maye narayananna jaye satata suj~jana |
Viye Baktara priye^^apa
Kannamaniye kamini mangalavani |
Sannute loka janani |
Ninna caranayugma |
Vanne nambide suprasanne sarvajivara |
Binne bagyasampanne ||
Mannisi mudadimda |
Binnapa lalisu |
Canne cakra pancajanya dharadevi ||1||

Atidayavante ninendu begadi bamdu |
Nutiside dinanagindu |
Patitarolidadale |
Gatige sammogamadu |
Tpatti sthiti layakarte atula sobanamurte |
Patiyali janiside|
Patige satiyade |
Patiya sangada ja | nitalada carite||2||

Kumkuvarata rajite dhavalagite |
Pamkajasadane kyate |
Lenka vatsale sarvalamkara maye ravi |
Sankase bahukala |
Sankatava vinase |
Manku matihara vijayaviththalana |
Sankalpake | ka | lankavagadante||3||
***

pallavi

kAyE karuNAmbudhiyE indirAdEvI

anupallavi

tAyE karuNAmbudhiyE mAyE nArAyaNA jAyE satata jnAnAviyE bhaktarapriyE

caraNam 1

kanyA maNiyE kAmini mangaLa vANI sannutE lOka janani
ninna caraNayugmavannu nambide suprasannE sarva jIva bhinnE bhAgya sampannE
mannisu dayadi nI bhinnapa lAlisi chenne cakra pAncajanya virAjitE

caraNam 2

ati dayavantE nInendu bEgadi bandu tutisuve dIna nAnebdu
patita roLidagale gatige sammataLAgutpatti sthiti layakarte atuLa shObhanamUrtE
patiyeli janisi nI patige satiyAde patiye sangada dhyAnitaLAda caritE

caraNam 3

kumkumAnkitE rAjitE nigama gItE pankajAsana mAtE
lOkavatsalE sarvAlankAramayE ravi sankshE bahukAlE sankaTa vinAshE
mankumatihara vijaya viThalana sankalpake kaLanka bhAradante
***


ಕಾಯೆ ಕರುಣಾಂಬುಧಿಯೇ |
ಇಂದಿರಾದೇವಿ ಕಾಯೆ ಕರುಣಾಂಬುಧಿಯೆ ||pa||

ಮಾಯೆ ನಾರಾಯಣನ್ನ ಜಾಯೆ ಸತತ ಸುಜ್ಞಾನ |
ವೀಯೆ ಭಕ್ತರ ಪ್ರೀಯೇಅಪ
ಕನ್ನಾಮಣಿಯೆ ಕಾಮಿನಿ ಮಂಗಳವಾಣಿ |
ಸನ್ನುತೆ ಲೋಕ ಜನನಿ |
ನಿನ್ನ ಚರಣಯುಗ್ಮ |
ವನ್ನೆ ನಂಬಿದೆ ಸುಪ್ರಸನ್ನೆ ಸರ್ವಜೀವರ |
ಭಿನ್ನೆ ಭಾಗ್ಯಸಂಪನ್ನೆ ||
ಮನ್ನಿಸಿ ಮುದದಿಂದ |
ಬಿನ್ನಪ ಲಾಲಿಸು |
ಚನ್ನೆ ಚಕ್ರ ಪಾಂಚಜನ್ಯ ಧರಾದೇವಿ ||1||

ಅತಿದಯವಂತೆ ನೀನೆಂದು ಬೇಗದಿ ಬಂದು |
ನುತಿಸಿದೆ ದೀನನಾಗಿಂದೂ |
ಪತಿತರೊಳಿಡದಲೆ |
ಗತಿಗೆ ಸಮ್ಮೊಗಮಾಡು |
ತ್ಪತ್ತಿ ಸ್ಥಿತಿ ಲಯಕರ್ತೆ ಅತುಳ ಶೋಭನಮೂರ್ತೆ |
ಪತಿಯಲಿ ಜನಿಸಿದೆ|
ಪತಿಗೆ ಸತಿಯಾದೆ |
ಪತಿಯ ಸಂಗಡ ಜ | ನಿತಳಾದ ಚರಿತೆ||2||

ಕುಂಕುವರತ ರಾಜಿತೆ ಧವಳಗೀತೆ |
ಪಂಕಜಸದನೆ ಖ್ಯಾತೆ |
ಲೆಂಕಾ ವತ್ಸಲೆ ಸರ್ವಾಲಂಕಾರ ಮಾಯೆ ರವಿ |
ಸಂಕಾಸೆ ಬಹುಕಾಲ |
ಸಂಕಟವ ವಿನಾಶೆ |
ಮಂಕು ಮತಿಹರ ವಿಜಯವಿಠ್ಠಲನ |
ಸಂಕಲ್ಪಕೆ | ಕ | ಳಂಕವಾಗದಂತೆ||3||
******