Showing posts with label ಗುರುವೆ ಸುಜನರ ಸುರತರುವೆ ಚರಣಕಮಲಗಳ ನಾ ನಂಬಿರುವೆ narashimha. Show all posts
Showing posts with label ಗುರುವೆ ಸುಜನರ ಸುರತರುವೆ ಚರಣಕಮಲಗಳ ನಾ ನಂಬಿರುವೆ narashimha. Show all posts

Monday, 6 September 2021

ಗುರುವೆ ಸುಜನರ ಸುರತರುವೆ ಚರಣಕಮಲಗಳ ನಾ ನಂಬಿರುವೆ ankita narashimha

ankita ನರಸಿಂಹ 

ರಾಗ: ರೇವತಿ  ತಾಳ: ಆದಿ

ಗುರುವೆ ಸುಜನರ ಸುರತರುವೆ

ಚರಣಕಮಲಗಳ ನಾ ನಂಬಿರುವೆ

ವರ ಮಂತ್ರಾಲಯದಲಿ ನೆಲೆಸಿರುವೆ

ಶರಣರು ಕರೆಯಲು ಧಾವಿಸಿ ಬರುವೆ 1

ಸ್ಮರಿಸಿದ ಮಾತ್ರದಿ ಸಂಕಟ ಪರಿಹಾರ

ದುರಿತ ತಿಮಿರಕೆ ಉದಯ ಭಾಸ್ಕರ 2

ಸಿರಿ ನರಸಿಂಹನ ಚರಣಾಬ್ಜ ಭ್ರಮರ 

ಕರುಣಿಸಿ ಕಾಯೊ ಗುರು ರಾಘವೇಂದ್ರ 3

***