by ಪ್ರಸನ್ನವೆಂಕಟದಾಸರು
ಚಪ್ಪಾಳೆ ನಿಕ್ಕೆಲೊ ಕೃಷ್ಣಮ್ಮ ಚಪಲ ಬಾಲ ರಂಗಮ್ಮಕಾಪುರುಷರ ಚಪ್ಪಾಳೆ ಮಾಳ್ಪ ಚಪ್ಪಾಳೆ ಪ.
ತುಪ್ಪ ಬೆಣ್ಣೆ ಪಾಲನೊಲ್ಲೆ ಹೆಪ್ಪನಿಟ್ಟ ದಧಿಯೊಲ್ಲೆಗೋಪಿಯರೊಡನೆ ಕೇಳಿಗೊಪ್ಪಿದ ಚಪ್ಪಾಳೆ 1
ಪಾಯಸವುಣ್ಣಲೊಲ್ಲೆ ಕಜ್ಜಾಯ ಸಕ್ಕರೆಯನೊಲ್ಲೆಆಯತಾಕ್ಷಿಯರ ಮೇಲೆ ಸ್ನೇಹದ ಚಪ್ಪಾಳೆ 2
ತನಿವಣ್ಣ ಮೆಲ್ಲಲೊಲ್ಲೆ ಮನೆಯ ಸೇರಲೊಲ್ಲೆ ಪ್ರಸನ್ನ ವೆಂಕಟಾದ್ರಿಲಿ ಕುಣಿವ ಚಪ್ಪಾಳೆ 3
*******