Showing posts with label ರಂಗರಾಯರ ಮುಂದೆಇವರಕೊಂಗಬುದ್ಧಿ ramesha. Show all posts
Showing posts with label ರಂಗರಾಯರ ಮುಂದೆಇವರಕೊಂಗಬುದ್ಧಿ ramesha. Show all posts

Saturday, 16 November 2019

ರಂಗರಾಯರ ಮುಂದೆಇವರಕೊಂಗಬುದ್ಧಿ ankita ramesha

by ಗಲಗಲಿಅವ್ವನವರು
ರಂಗರಾಯರ ಮುಂದೆಇವರಕೊಂಗಬುದ್ಧಿಕೋಲಹೊಯ್ಸಿಹಂಗಿನ ಮುಯ್ಯ ಕಳೆದೆವಇವರ ತಂಗಿಯರಮಾರಿಭಂಗಿಸಿ ನಾವು ಪ.

ಅಪ್ಪ ಅರಸು ಆಗೊ ಇವರತಪ್ಪಿನ ಮಾತಿಲೆ ಸೋಲಿಸಿನಿಮ್ಮಪ್ಪ ನಿಮ್ಮರಸನೆಂಬೊಚಪ್ಪಾಳೆಯನಿಕ್ಕಿಸಿ ನಾವು 1

ಒಡ ಹುಟ್ಟಿದಣ್ಣನ ದ್ರೌಪತಿಒಡಗೂಡುತಲಿ ತಾ ಇಡುವರೆಈ ಆಣೆ ನಮಗೆನುಡಿದ ಆ ನುಡಿಗೆ ನಾಚಿಸಿ ಇವರನು 2

ಹುಟ್ಟು ಹೊಂದೊದೆಂಬೋದಿವರಬಿಟ್ಟು ಕಡೆಗೆ ಮಾಡಿಸಿನಾವುಶ್ರೀ ಕೃಷ್ಣನಂಫ್ರಿ ಕಮಲವನ್ನುಎಷ್ಟು ದಯದಿ ತೋರಿಸಿ 3

ಅಷ್ಟ ಮದದ ತಮವು ಎಂಬೊಕುಟ್ಟಿ ಹಿಟ್ಟು ಮಾಡಿಸಿ ನಾವುಸಿಟ್ಟು ಕೋಪವೆಂಬೊ ಬಣವಿ ಒಟ್ಟಿಕೆಂಡ ಹೇರಿಸಿ ನಾವು 4

ಸತ್ವರಜ ತಮವು ಎಂಬೊಕತ್ತಲೆಯ ಅಡಗಿಸಿ ನಾವುಮತ್ತೆ ಜ್ಞಾನ ಸೂರ್ಯನಪ್ರಶಸ್ತ ಉದಯ ಮಾಡಿಸಿ 5

ನೀತಿ ತಪ್ಪಿದ ಬಾಲೆಯರಭೂತ ಹೊರಗೆ ಹೊರಡಿಸಿನಾವುಮಾತ್ರಗಳೆಂಬೊ ಇವರಗಾತ್ರಬಿಟ್ಟು ದೂರ ಇಡಿಸಿ6

ಸಂಚಿತಗಾಮಿಯು ಇವರಕಿಂಚಿತುಳಿಯದಲೆ ಹಾರಿಸಿ ನಾವುಪಂಚ ಪಾಂಡವರ ಮಡದಿಪಾಂಚಾಲಿಯ ನಾಚಿಸಿ 7

ದಶೇಂದ್ರಿಯಗಳೆಂಬೊ ಕುದುರೆಗಳದಶ ದಿಕ್ಕಿಗೆ ಓಡಿಸಿ ನಾವುಮುಸುಕು ಹಾಕಿದ ಅಂಗವನುಕೊಸರಿ ಕೊಸರಿ ಝೂಡಿಸಿ 8

ನಿಂದ್ಯವಾದಪಟಲುವಿದ್ಯೆಚಿಂದಿ ಚಿಂದಿ ಮಾಡಿಸಿ ನಾವುತಂದೆ ರಾಮೇಶನ ಪಾದಕೆತಂದು ಇವರ ಹೊಂದಿಸಿ 9
********