ಪುರಂದರದಾಸರು
ಬೇಡವೆನ್ನೆ ನೀನು ಗೋಪಮ್ಮ ಪ
ಕಾಡುವ ಕೃಷ್ಣಗೆ ಕರೆದು ಬುದ್ಧಿಯ ಹೇಳೆ ಅ.ಪ
ಎಣ್ಣೆ ಮಂಡೆಯಲಿ ಬಣ್ಣದ ಬಚ್ಚಲೊಳಗಿರೆ |ಬಣ್ಣಿಸಿ ಆಟಕಾಳಿ ಹಚ್ಚುವೆನೆನುತಲಿ ||ಬೆನ್ನು ಒರಸಲು ಬಂದ-ಬೆದರೇಳ್ವರ |ಮುನ್ನ ತಕೈಸಿಕೊಂಡ-ಗೋಪಮ್ಮ ನಿನ್ನ |ಚಿಣ್ಣಸಿರಿಗೇಡಿಯು ಎನ್ನ ನಾಚಿಕೆಗೊಂಡ1
ನೆಲುವಿಗೆ ಹಾಲ ಏರಿಸುವಳ ಕೈವಿಡಿದು |ಕಿಲಿಕಿಲಿ ಕಿವಿಮಾತ ಹೇಳುವೆ ಎನುತಲಿ ||ಕಲೆಯನಿಕ್ಕಿದ ಗಲ್ಲಕೆ-ಮೇಲ್ಮಲಕಿನ |ತಳಕಿಕ್ಕಿ ಕೆಡಹಲಿಕೆ-ಕೆಳಗೆ ಬಿದ್ದು |ಬಳಲಿ ಬಂದೆವೆ ನಿಮ್ಮ ಬಳಿಗೆ ಗೋಪಮ್ಮ 2
ಮನೆಮನೆಯೊಳು ದಂಪತಿಗಳಿದ್ದ ಮಂಚ-|ವನು ನಡು ಬೀದಿಯೊಳ್ ಹಾಕಿ ಕಲೆವನೆ ಕೃಷ್ಣ ||ಮನು ಮಥನಯ್ಯ ಕಾಣೆ-ಈತನು ಮಹಾ |ಮುನಿಗಳ ಮನಕೆ ನಿಲುಕದಿಪ್ಪಗೆ-ಮೂಲೋಕಕೆ |ಘನಮಹಿಮ ನಮ್ಮ ಶ್ರೀ ಪುರಂದರವಿಠಲಗೆ 3
***

pallavi
bEDavenne nInu kADuva krSNana karedu buddhiya hELe
caraNam 1
eNNeya maNDeyali baNNa baccaloLire baNNisi adagaLeyannu haccuvenendu bennaroLesali
bandu bedaruvaLa cennAgiyappikoNDa gOpyamma ninna ciNNa carigEDi hIgenna nAcike koNDa
caraNam 2
neluvige pAlanErisuvaLmole hiDidu kela keladu kivi mAtanADuvenenutalikaleyanikkida gallakke
balu daLagina malakikki keDahalEke nelakke biddu baLali bandevu ninna baLige gOpyamma
caraNam 3
manemaneyoLagidda satipatiyara manca jana nODe naDubidiyoLagiTTu naguva manumathanayya
kANe munigaLa manake silukadippane mUjagakella ghana mahima purandara viTTalarAyana
***