Showing posts with label ಏಳಯ್ಯ ಸದ್ಗುರುರಾಯ ಈಗ ಏಳು ತುರಗ ಸೂತನುದಯಿಸುವ ಸಮಯ shyamasundara. Show all posts
Showing posts with label ಏಳಯ್ಯ ಸದ್ಗುರುರಾಯ ಈಗ ಏಳು ತುರಗ ಸೂತನುದಯಿಸುವ ಸಮಯ shyamasundara. Show all posts

Wednesday, 1 September 2021

ಏಳಯ್ಯ ಸದ್ಗುರುರಾಯ ಈಗ ಏಳು ತುರಗ ಸೂತನುದಯಿಸುವ ಸಮಯ ankita shyamasundara

 ..

ಏಳಯ್ಯ ಸದ್ಗುರುರಾಯ | ಈಗ

ಏಳು ತುರಗ ಸೂತನುದಯಿಸುವ ಸಮಯ ಪ


ಎದ್ದು ಶಿಷ್ಯರ ಕರೆಯಬೇಕು | ಗುರು

ಮಧ್ವಮತದ ತತ್ವ ಭೋಧಿಸಬೇಕು

ಇದ್ದ ದೋಷವ ಕಳೆಯಬೇಕು ಪರಿ

ಶುದ್ಧರ ಮಾಡಿ ನೀನುದ್ಧರಿಸಬೇಕು 1


ಶೌರಿಕಥಾಮೃತ ಸಾರೋದ್ಧಾರ | ಭಾಗವತ ಶಾಸ್ತ್ರವಿಚಾರ

ಮುರೆರಡು ವಿಧ ಭೇದ ತಾರತಮ್ಯ

ಸಾರುತ ಸಲಹೋ ಶಿಷ್ಯಪರಿವಾರ 2


ಪದಸುಳಾದಿಗಳ ಕೇಳಬೇಕು | ಕೇಳಿ

ಅದರೊಳಿರುವ ತತ್ವವಿವರಿಸಬೇಕು

ಮದಡತನವ ಕಳೆಯಬೇಕು ನಿನ್ನ

ಪದ ನಂಬಿದವರಿಗೆ ಮುದಗರಿಯ ಬೇಕು 3


ಸತ್ಯನಾರಾಯಣ ಕಥೆಯ | ಬಹುವಿಸ್ತಾರವಾಗಿ

ನೀ ಬಿತ್ತರಿಸಯ್ಯ | ಭೃತ್ಯರಾ ಮಾಯೆ

ಓಡಿಸಯ್ಯ ಅಜ್ಞಾನ

ಜ್ಞಾನ ಭಕ್ತಿ ವೈರಾಗ್ಯ ಸಂಪತ್ತು ನೀಡಯ್ಯ 4


ಒಂದೂರು ನಿಲಯನೆ ಏಳೊ ಶಾಮ

ಸುಂದರವಿಠಲನ ಮಂದಿರನಾಳೋ

ಬಂದ ನಿಂದೆಗಳೆಲ್ಲ ಹೂಳೋ ನಿನ್ನ

ಪೊಂದಿದ ನಮ್ಮನ್ನು ಅಗಲಿದೆ ಆಳೊ 5

***