..
ಏಳಯ್ಯ ಸದ್ಗುರುರಾಯ | ಈಗ
ಏಳು ತುರಗ ಸೂತನುದಯಿಸುವ ಸಮಯ ಪ
ಎದ್ದು ಶಿಷ್ಯರ ಕರೆಯಬೇಕು | ಗುರು
ಮಧ್ವಮತದ ತತ್ವ ಭೋಧಿಸಬೇಕು
ಇದ್ದ ದೋಷವ ಕಳೆಯಬೇಕು ಪರಿ
ಶುದ್ಧರ ಮಾಡಿ ನೀನುದ್ಧರಿಸಬೇಕು 1
ಶೌರಿಕಥಾಮೃತ ಸಾರೋದ್ಧಾರ | ಭಾಗವತ ಶಾಸ್ತ್ರವಿಚಾರ
ಮುರೆರಡು ವಿಧ ಭೇದ ತಾರತಮ್ಯ
ಸಾರುತ ಸಲಹೋ ಶಿಷ್ಯಪರಿವಾರ 2
ಪದಸುಳಾದಿಗಳ ಕೇಳಬೇಕು | ಕೇಳಿ
ಅದರೊಳಿರುವ ತತ್ವವಿವರಿಸಬೇಕು
ಮದಡತನವ ಕಳೆಯಬೇಕು ನಿನ್ನ
ಪದ ನಂಬಿದವರಿಗೆ ಮುದಗರಿಯ ಬೇಕು 3
ಸತ್ಯನಾರಾಯಣ ಕಥೆಯ | ಬಹುವಿಸ್ತಾರವಾಗಿ
ನೀ ಬಿತ್ತರಿಸಯ್ಯ | ಭೃತ್ಯರಾ ಮಾಯೆ
ಓಡಿಸಯ್ಯ ಅಜ್ಞಾನ
ಜ್ಞಾನ ಭಕ್ತಿ ವೈರಾಗ್ಯ ಸಂಪತ್ತು ನೀಡಯ್ಯ 4
ಒಂದೂರು ನಿಲಯನೆ ಏಳೊ ಶಾಮ
ಸುಂದರವಿಠಲನ ಮಂದಿರನಾಳೋ
ಬಂದ ನಿಂದೆಗಳೆಲ್ಲ ಹೂಳೋ ನಿನ್ನ
ಪೊಂದಿದ ನಮ್ಮನ್ನು ಅಗಲಿದೆ ಆಳೊ 5
***
No comments:
Post a Comment