Wednesday, 1 September 2021

ಸದಾ ನಿನ್ನ ಭಜಿಪೆ ದಯದಿ ಪದಾಯುಗವ ನೀಡಿನ್ನಾ ankita gurujagannatha vittala

 ..

ಸದಾ ನಿನ್ನ ಭಜಿಪೆ ದಯದಿ

ಪದಾಯುಗವ ನೀಡಿನ್ನಾ ಪ


ಹೃದಾಯದಲಿ ನಿಂತು ಮುದಾವ ನೀಡುತ

ಬುಧಾಮತಿಯನಿತ್ತು ಬದೀಗನಾಗಿಪ್ಪೆ ಅ.ಪ

ಉದಾಧಿಶಯನ ಎನ್ನ ವದÀನದಿ

ಸದಾ ನಿಂತು ಘನ್ನಾ ರನ್ನಾ

ಪದಾದಿವಚನವ ಸದಾಯಭಾವದಿ

ಮುದಾದಿ ಮುಖದಲಿ ಉದಾಯಗೈಸಿದಿ 1


ಮದಾಕರಿಯ ಭಂಗಾ ಮಾಡಿ

ಸದಾ ನಿ ನಿಸ್ಸಂಗಾ ರಂಗಾ

ವದಾಗಿ ನೀನಂದು ಸುಧಾಮ ಗೊಲಿದೆಯೆ

ವಿದಾರಿತಾರಿಯೆ ಪದೂಮನಾಭನೆ 2


ನೀತಾ ಗುಣಗಳನ್ನಾ ಇನ್ನಾ

ತಾತಾ ವ್ಯಕ್ತ ಮಾಡೊ ಘನ್ನಾ

ದಾತಾ ಗುರುಜಗನ್ನಾಥವಿಠಲ ನಿಜ

ದೂತಾನೆನಿಪ ಎನ್ನ ಮಾತು ಲಾಲಿಸೊ ಸ್ವಾಮೀ 3

***


No comments:

Post a Comment