by ಪ್ರಸನ್ನವೆಂಕಟದಾಸರು
ಎಲ್ಲೆಲ್ಲಿ ಭಾಗವತಾಂಶ ಮತ್ತೆಲ್ಲೆಲ್ಲಿ ಹರಿಸನ್ನಿವಾಸಎಲ್ಲೆಲ್ಲಿ ಕರೆದರೆ ದಾಸರಲ್ಲಲ್ಲಿಗೆಬಾಹರಮೇಶಪ.
ಆವೆಡೆ ಲಕ್ಷವಂದನೆಯು ಆವಾವೆಡೆಗೆ ಭಕ್ತ ನರ್ತನೆಯುಆವೆಡೆ ಸುಪ್ರದಕ್ಷಿಣೆಯು ಆವಾವೆಡೆ ರಂಗನಾರಾಧನೆಯು 1
ಎಂತು ದಂಡಿಗೆ ತಾಳ ಘೋಷ ಎಂತೆಂತು ಕಥಾಮೃತ ವರುಷಎಂತು ತತ್ವಾರ್ಥ ಜಿಜ್ಞಾಸ ಅಂತಂತೆ ಶ್ರೀಕಾಂತನ ಹರುಷ 2
ಎಷ್ಟು ತಂತ್ರಸಾರಾರ್ಚನೆಯು ಎಷ್ಟೆಷ್ಟುಶ್ರುತಿಸೂತ್ರಗಳ ಧ್ವನಿಯುಎಷ್ಟು ತಾತ್ಪರ್ಯ ವರ್ಣನೆಯು ಅಷ್ಟಷ್ಟು ಕೃಷ್ಣನಕಂಠ ಮಣಿಯು 3
ಏಸುಶ್ರೀಹರಿವ್ರತ ಮೌನ ಏಸೇಸು ಶ್ರೀ ಹರಿರೂಪಧ್ಯಾನಏಸುಸದ್ವ್ಯಾಖ್ಯಾನ ದಾನ ಆಸನ್ನ ಕೈವಲ್ಯನಿದಾನ4
ಎನಿತು ಗುರುಪಾದಗಳ ಸ್ಮರಣೆ ಎನಿತೆನಿತು ಮಧ್ವಯತಿಗಳ ಸ್ಮರಣೆಎನಿತೇಕಾದಶಿಯ ಜಾಗರಣೆ ಅನಿತನಿತು ಸುಲಭ ಹರಿಸ್ಮರಣೆ 5
ಆರು ಆರೂರು ಮೆಟ್ಟಿಹರು ಮತ್ತಾರೂರರಸರ ಕಟ್ಟಿಹರುಆರೀರ್ವರ ಪೊರಮಟ್ಟಿಹರು ಆರಾರಾಗಲಿ ಕೃಷ್ಣನವರು 6
ಹೇಗೆ ಸಜ್ಜನರ ಉಲ್ಲಾಸ ಹಾಗ್ಹಾಗೆ ಮಹಾಮಹಿಮರಭಿಲಾಷಹೇಗೆ ಬುಧರ ಪರಿತೋಷ ಹಾಗಾಗುವುದು ಪ್ರಸನ್ವೆಂಕಟೇಶ 7
****