Showing posts with label ಮಂಗಳಗೌರಿಯ ಪೂಜಿಪ ಬನ್ನಿ ಮಂಗಳ madhwesha krishna MANGALAGOWRIYA POOJIPA BANNI MANGALA. Show all posts
Showing posts with label ಮಂಗಳಗೌರಿಯ ಪೂಜಿಪ ಬನ್ನಿ ಮಂಗಳ madhwesha krishna MANGALAGOWRIYA POOJIPA BANNI MANGALA. Show all posts

Thursday, 2 December 2021

ಮಂಗಳಗೌರಿಯ ಪೂಜಿಪ ಬನ್ನಿ ಮಂಗಳ ankita madhwesha krishna MANGALAGOWRIYA POOJIPA BANNI MANGALA

 


ANKITA Madwesha krishna

ಮಂಗಳಗೌರಿ ಆರತಿಹಾಡು

 ಮಂಗಳ ಗೌರಿಯ ಪೂಜಿಪ ಬನ್ನಿ ಮಂಗಳ ಗೌರಿಯ ಧ್ಯಾನಿಪ

ಬನ್ನಿ

 ಮಂಗಳ ಪದಗಳ ಹಾಡುವ ಬನ್ನಿ ಮಂಗಳಾರತಿಯ ಬೆಳಗುವ

ಬನ್ನಿ||ಪಲ್ಲ||


 ಮನೆಯ ಸಾರಿಸಿ ರಂಗವಾಲಿಗಳಹಾಕಿ ಪೀಠವ ತಂದಿಟ್ಟು

ವಸ್ತ್ರವ ಪರಚಿ

 ತಂಡುಲವ ಹಾಕಿ ಗೌರಿಯನಿಟ್ಟು ಶ್ರಧ್ಧೆಯಿಂದಲಿ ಅಣಿಮಾಡಿ

||೧||


 ಭಕ್ತಿ ಶ್ರಧ್ಧೆಯಿಂದ  ಪೂಜೆಗೆನುತ ಪರಿಪರಿ ಪುಷ್ಪಗಳ ತಂದಿರಿಸಿ

 ಕ್ಯಾದಿಗಿ ಕುಸುಮ ಮಲ್ಲಿಗೆ ಪತ್ರ ಫಲಗಳ ಬ್ಯಾಗದಿಂದಲಿ

ತಂದಿರಿಸಿ||೨||


 ಜೋಡು ದೀಪಗಳಹಚ್ಚಿ ಕಡ್ಡಿ ಬತ್ತಿಯ ಸಹಿತನಾರಿಕೇಳವ 

 ಇಡುತ್ತಲಿ

 ಅರಿಷಿಣ ಕುಂಕುಮ ಗೆಜ್ಜೆ ವಸ್ತ್ರ ಏರಿಸಿ ಅಡಕೆ ವೀಳೆದೆಲೆ  ಇಡುತತಲಿ||೩||


 ಗಂಧ ಕುಂಕುಮ ದೀಪ ಧೂಪದಿ ಪುಜಿಸಿ ಕಡ್ಡಿಬತ್ತಿ ಆರತಿಮಾಡಿ

 ಕಪ್ಪನೆ ಹಿಡಿದು ಒಪ್ಪಾಗಿ ತಂದು ಮುತೈದೆಯರಿಗೆ ನೀಡುತ್ತಲಿ||೪||


 ಐದು ಹೂರಣದ ಆರತಿಮಾಡಿ ಐದು ಗಂಟಿನ ದಾರ ಕಟ್ಟಿ

ಮುತೈದೆತನವು ಸ್ಥಿರವಾಗಿ ಇರಲೆಂದು ಮಧ್ವೇಶಕೃಷ್ಣನ  ಬೇಡು

ತ್ತಲಿ||೫||

****