ANKITA Madwesha krishna
ಮಂಗಳಗೌರಿ ಆರತಿಹಾಡು
ಮಂಗಳ ಗೌರಿಯ ಪೂಜಿಪ ಬನ್ನಿ ಮಂಗಳ ಗೌರಿಯ ಧ್ಯಾನಿಪ
ಬನ್ನಿ
ಮಂಗಳ ಪದಗಳ ಹಾಡುವ ಬನ್ನಿ ಮಂಗಳಾರತಿಯ ಬೆಳಗುವ
ಬನ್ನಿ||ಪಲ್ಲ||
ಮನೆಯ ಸಾರಿಸಿ ರಂಗವಾಲಿಗಳಹಾಕಿ ಪೀಠವ ತಂದಿಟ್ಟು
ವಸ್ತ್ರವ ಪರಚಿ
ತಂಡುಲವ ಹಾಕಿ ಗೌರಿಯನಿಟ್ಟು ಶ್ರಧ್ಧೆಯಿಂದಲಿ ಅಣಿಮಾಡಿ
||೧||
ಭಕ್ತಿ ಶ್ರಧ್ಧೆಯಿಂದ ಪೂಜೆಗೆನುತ ಪರಿಪರಿ ಪುಷ್ಪಗಳ ತಂದಿರಿಸಿ
ಕ್ಯಾದಿಗಿ ಕುಸುಮ ಮಲ್ಲಿಗೆ ಪತ್ರ ಫಲಗಳ ಬ್ಯಾಗದಿಂದಲಿ
ತಂದಿರಿಸಿ||೨||
ಜೋಡು ದೀಪಗಳಹಚ್ಚಿ ಕಡ್ಡಿ ಬತ್ತಿಯ ಸಹಿತನಾರಿಕೇಳವ
ಇಡುತ್ತಲಿ
ಅರಿಷಿಣ ಕುಂಕುಮ ಗೆಜ್ಜೆ ವಸ್ತ್ರ ಏರಿಸಿ ಅಡಕೆ ವೀಳೆದೆಲೆ ಇಡುತತಲಿ||೩||
ಗಂಧ ಕುಂಕುಮ ದೀಪ ಧೂಪದಿ ಪುಜಿಸಿ ಕಡ್ಡಿಬತ್ತಿ ಆರತಿಮಾಡಿ
ಕಪ್ಪನೆ ಹಿಡಿದು ಒಪ್ಪಾಗಿ ತಂದು ಮುತೈದೆಯರಿಗೆ ನೀಡುತ್ತಲಿ||೪||
ಐದು ಹೂರಣದ ಆರತಿಮಾಡಿ ಐದು ಗಂಟಿನ ದಾರ ಕಟ್ಟಿ
ಮುತೈದೆತನವು ಸ್ಥಿರವಾಗಿ ಇರಲೆಂದು ಮಧ್ವೇಶಕೃಷ್ಣನ ಬೇಡು
ತ್ತಲಿ||೫||
****
No comments:
Post a Comment