Showing posts with label ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ vyasa vittala TILIYADO NINNAATA TIRUPATIYA VENKATA. Show all posts
Showing posts with label ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ vyasa vittala TILIYADO NINNAATA TIRUPATIYA VENKATA. Show all posts

Friday, 27 December 2019

ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ ankita vyasa vittala TILIYADO NINNAATA TIRUPATIYA VENKATA






ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ |ಪ|

ಪೊಳೆವ ನೀರೊಳು ಗೆಲುವ ಮೋರೆಯ
ನೆಲವ ನೋಡುವ ಸುಳಿವ ಕಂಬದಿ
ಇಳೆಯನಳೆಯುವ ಭಳಿರೆ ಭಾರ್ಗವ
ಖಳನ ಛೇಧಿಸಿ ಕೊಳಲಧ್ವನಿಗೆ
ನಳಿನಮುಖಿಯರ ನಾಚಿಸುವ ಬಲು
ಹಯದಳದ ಬಹು ಹವಣೆಗಾರನೆ||a.p.

ಆರು ಬಲ್ಲರು ನಿಮ್ಮ ಶ್ರೀ ಲಕುಮಿಯ ಮನಸಿಗೆ ತೋರುವಿಯೊ ಪರಬೊಮ್ಮ
ಉಳಿದವರು ಬಲ್ಲರೆ ನೀರಜಾಸನ ಬೊಮ್ಮ ಇದು ನಿನ್ನ ಮರ್ಮ
ನೀರೊಳಗೆ ಮನೆ ಭಾರ ಬೆನ್ನಿಲಿ ಕೋರದಾಡೆಯ ನಾರಸಿಂಹನೆ
ಧರೆಯ ಬೇಡಿದ ಧೀರಪುರುಷನೆ ವಾರಿಬಂಧನ ಮಾರಜನಕನೆ
ನಾರಿಯರ ವ್ರತವಳಿದು ಕುದುರೆಯನೇರಿ ಮೆರೆಯುವ ಸುಂದರಾಂಗನೆ||

ಸಕಲಮಾಯವಿದೇನು ವೃಕನ ವಾಯು ಸಖನ ಸಲಹಿದೆ ನೀನು
ಭಕುತಿಯಿಂದಲಿ ತುತಿಪರಿಗೆ ಸುರಧೇನು ಸುರಕಾಮಧೇನು
ನಿಖಿಳ ವೇದೋದ್ಧಾರ ಗಿರಿಧರ ಅಖಿಳ ಭೂಮಿಯ ತಂದ ನರಹರಿ
ಯುಕುತಿಯಲಿ ನೆಲನಳೆದ ಭಾರ್ಗವ ಮುಕುತಿಗೋಸುಗ ಫಲವ ಸವಿದನೆ
ರುಕುಮನನುಜೆಯ ರಮಣ ಬೌದ್ದನೆ ಲಕುಮಿರಮಣನೆ ಕಲ್ಕಿರೂಪಿಯೆ||

ನಿನ್ನ ರೂಪಿನ ಲೀಲಾ ನೋಡುವ ಜನಕೆ ಕಣ್ಣು ಸಾವಿರವಿಲ್ಲ
ನಾ ಪಾಡಿ ಪೊಗಳಲು ಪನ್ನಗಾಧಿಪನಲ್ಲ ನೀನರಿಯದಿಲ್ಲ
ಕಣ್ಣುಮುಚ್ಚಿದೆ ಬೆನ್ನು ತೋರುವಿ ಮಣ್ಣು ಕೆದರುವಿ ಚಿಣ್ಣಗೊಲಿದನೆ
ಸಣ್ಣವಾಮನ ಅಣ್ಣರಾಮನೆ ಪುಣ್ಯಪುರುಷನೆ ಬನ್ನ ಬಡಕನೆ
ಹೆಣ್ಣುಗಳ ವ್ರತಕೆಡಿಸಿ ತೇಜಿಯ ಬೆನ್ನನೇರಿದ ವ್ಯಾಸವಿಠಲ||
****


ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ ||pa||

ಪೊಳೆವ ನೀರೊಳು ಗೆಲುವ ಮೋರೆಯನೆಲವ ನೋಡುವ ಸುಳಿವ ಕಂಬದಿ |ಇಳೆಯನಳೆಯುವ ಭಳಿರೆ ಭಾರ್ಗವ ಖಳನ ಛೇದಿಸಿ ಕೊಳಲ ಧ್ವನಿಗೆ ||ನಳಿನಮುಖಿಯರ ನಾಚಿಸುವ ಬಲು ಹಯದಳದ ಬಹು ಹವಣಿಗಾರನೆ||a.pa||

ಆರು ಬಲ್ಲರು ನಿಮ್ಮ – ಶ್ರೀ ಲಕುಮಿ ಮನಸಿಗೆತೋರುದಿಹ ಪರಬೊಮ್ಮ _ ಉಳಿದವರು ಬಲ್ಲರೆನೀರಜಾಸನ ಬೊಮ್ಮ _ ಇದು ನಿನ್ನ ಮರ್ಮ ||
ನೀರೊಳಗೆ ಮನೆ ಭಾರ ಬೆನ್ನಿಲಿಕೋರೆ ದಾಡೆಯ ನಾರಸಿಂಹನೆ |
ಧರೆಯ ಬೇಡಿದ ಧೀರ ಪುರುಷನೆವಾರಿ ಬಂಧನ ಮಾರಜನಕನೆ ||
ನಾರಿಯರ ವ್ರತವಳಿದು ಕುದುರೆಯನೇರಿ ಮೆರೆಯುವ ಸುಂದರಾಂಗನೆ ||1||

ಸಕಲ ಮಾಯವಿದೇನು _ ವೃಕನ ವಾಯುಸಖನ ಸಲಹಿದೆ ನೀನು _ ಭಕುತಿಯಿಂದಲಿತುತಿಪರಿಗೆ ಸುರಧೇನು _ ಸುರ ಕಾಮಧೇನು ||
ನಿಖಿಳ ವೇದೋದ್ಧಾರ ಗಿರಿಧರ ಅಖಿಳ ಭೂಮಿಯ ತಂದ ನರಹರಿ |
ಯುಕುತಿಯಲಿ ನೆಲನಳೆದ ಭಾರ್ಗವಮುಕುತಿಗೋಸುಗ ಫಲವ ಸವಿದನೆ ||
ರುಕುಮನನುಜೆಯ ರಮಣ ಬೌದ್ಧನೆಲಕುಮಿ ರಮಣನೆ ಕಲ್ಕಿರೂಪಿಯೆ ||2||

ನಿನ್ನ ರೂಪಿನ ಲೀಲಾ – ನೋಡುವ ಜನಕೆಕಣ್ಣು ಸಾಸಿರವಿಲ್ಲಾ _ ನಾ ಪಾಡಿ ಪೊಗಳಲುಪನ್ನಗಾಧಿಪನಲ್ಲ _ ನೀನರಿಯದಿಲ್ಲ ||
ಕಣ್ಣು ಮುಚ್ಚದೆ ಬೆನ್ನು ತೋರಿದಿಮಣ್ಣು ಕೆದರುವೆ ಚಿಣ್ಣಗೊಲಿದನೆ |
ಸಣ್ಣ ವಾಮನ ಅಣ್ಣ ರಾಮನೆ ||ಪುಣ್ಯ ಪುರುಷನೆ ಬನ್ನ ಬಡುಕನೆ ||
ಹೆಣ್ಣುಗಳ ವ್ರತ ಕೆಡಿಸಿ ತೇಜಿಯಬೆನ್ನನೇರಿದ ವ್ಯಾಸ ವಿಠ್ಠಲ ||3||
*******