Showing posts with label ಜಯ ಮಂಗಳಂ ನಿತ್ಯ ಶುಭಮಂಗಳಂ ಗುರುಭಕ್ತಿಯೆಂತೆಂಬ purandara vittala. Show all posts

Thursday, 5 December 2019

ಜಯ ಮಂಗಳಂ ನಿತ್ಯ ಶುಭಮಂಗಳಂ ಗುರುಭಕ್ತಿಯೆಂತೆಂಬ purandara vittala

ಪುರಂದರದಾಸರು
ಜಯ ಮಂಗಳಂನಿತ್ಯ ಶುಭಮಂಗಳಂಪ.

ಗುರುಭಕ್ತಿಯೆಂತೆಂಬ ಗಮಕದೋಲೆಯನಿಟ್ಟುಹರಿಧ್ಯಾನವೆಂಬ ಆಭರಣವಿಟ್ಟು ||ಪರತತ್ತ್ವವೆಂತೆಂಬ ಪಾರಿಜಾತವ ಮುಡಿದುಪರಮಾತ್ಮ ಹರಿಗೆ ಆರತಿಯೆತ್ತಿರೆ 1

ಆದಿ ಮೂರತಿಯೆಂಬ ಅಚ್ಚ ಅರಿಸಿಣ ಬಳೆದುವೇದ ಮುಖವೆಂಬ ಕುಂಕುಮವನಿಟ್ಟು ||ಸಾಧು - ಸಜ್ಜನ ಸೇವೆಯೆಂಬ ಸಂಪಿಗೆ ಮುಡಿದುಮೋದದಿಂ ಲಕ್ಷ್ಮೀಗಾರತಿಯೆತ್ತಿರೆ 2

ತನುವೆಂಬ ತಟ್ಟಿಯಲಿ ಮನದ ಸೊಡರನು ಇಡಿಸಿಘನಶಾಂತಿಯೆಂಬ ಆಜ್ಯವನುತುಂಬಿ ||ಆನಂದವೆಂತೆಂಬ ಜ್ಯೋತಿಯನು ಹಚ್ಚಿತುಚಿನುಮಯ ಹರಿಗೆ ಆರತಿಯೆತ್ತಿರೆ 3

ಕಾಮಾಂಧವಳಿದಂತ ಕಮಲದ ತಟ್ಟೆಯಲಿನೇಮವೆಂತೆಂಬ ಹರಿದ್ರವನು ಕದಡಿ ||ಆ ಮಹಾಸುಜ್ಞಾನವೆಂಬ ಸುಣ್ಣವ ಬೆರಸಿಸೋಮಧರವರದಗಾರತಿಯೆತ್ತಿರೆ 4

ನಾರದವಂದ್ಯಗೆನವನೀತ ಚೋರಗೆನಾರಾಯಣಗೆ ಶ್ರೀ ವರಲಕ್ಷ್ಮೀಗೆ ||ಸಾರಿದವರನು ಪೊರೆವ ಪುರಂದರವಿಠಲಗೆನೀರಜಮುಖಿಯರಾರತಿಯೆತ್ತಿರೆ5
*******

ಜಯ ಮಂಗಳಂ ನಿತ್ಯ ಶುಭಮಂಗಳಂ ಗುರುಭಕ್ತಿಯೆಂತೆಂಬ purandara vittala

ಪುರಂದರದಾಸರು
ಜಯ ಮಂಗಳಂ ನಿತ್ಯ ಶುಭಮಂಗಳಂ ಪ.