ಪುರಂದರದಾಸರು
ಜಯ ಮಂಗಳಂ ನಿತ್ಯ ಶುಭಮಂಗಳಂ ಪ.
ಗುರುಭಕ್ತಿಯೆಂತೆಂಬ ಗಮಕದೋಲೆಯನಿಟ್ಟುಹರಿಧ್ಯಾನವೆಂಬ ಆಭರಣವಿಟ್ಟು ||ಪರತತ್ತ್ವವೆಂತೆಂಬ ಪಾರಿಜಾತವ ಮುಡಿದುಪರಮಾತ್ಮ ಹರಿಗೆ ಆರತಿಯೆತ್ತಿರೆ 1
ಆದಿ ಮೂರತಿಯೆಂಬ ಅಚ್ಚ ಅರಿಸಿಣ ಬಳೆದುವೇದ ಮುಖವೆಂಬ ಕುಂಕುಮವನಿಟ್ಟು ||ಸಾಧು - ಸಜ್ಜನ ಸೇವೆಯೆಂಬ ಸಂಪಿಗೆ ಮುಡಿದುಮೋದದಿಂ ಲಕ್ಷ್ಮೀಗಾರತಿಯೆತ್ತಿರೆ 2
ತನುವೆಂಬ ತಟ್ಟಿಯಲಿ ಮನದ ಸೊಡರನು ಇಡಿಸಿಘನಶಾಂತಿಯೆಂಬ ಆಜ್ಯವನುತುಂಬಿ ||ಆನಂದವೆಂತೆಂಬ ಜ್ಯೋತಿಯನು ಹಚ್ಚಿತುಚಿನುಮಯ ಹರಿಗೆ ಆರತಿಯೆತ್ತಿರೆ 3
ಕಾಮಾಂಧವಳಿದಂತ ಕಮಲದ ತಟ್ಟೆಯಲಿನೇಮವೆಂತೆಂಬ ಹರಿದ್ರವನು ಕದಡಿ ||ಆ ಮಹಾಸುಜ್ಞಾನವೆಂಬ ಸುಣ್ಣವ ಬೆರಸಿಸೋಮಧರವರದಗಾರತಿಯೆತ್ತಿರೆ 4
ನಾರದವಂದ್ಯಗೆನವನೀತ ಚೋರಗೆನಾರಾಯಣಗೆ ಶ್ರೀ ವರಲಕ್ಷ್ಮೀಗೆ ||ಸಾರಿದವರನು ಪೊರೆವ ಪುರಂದರವಿಠಲಗೆನೀರಜಮುಖಿಯರಾರತಿಯೆತ್ತಿರೆ5
*******

No comments:
Post a Comment