Showing posts with label ಜಯತೀರ್ಥ ಜಯತೀರ್ಥ ದಯವಾರಿಧಿ shyamasundara JAYATEERTHA JAYATEERTHA DAYAVAARIDHI JAYATEERTHA STUTIH. Show all posts
Showing posts with label ಜಯತೀರ್ಥ ಜಯತೀರ್ಥ ದಯವಾರಿಧಿ shyamasundara JAYATEERTHA JAYATEERTHA DAYAVAARIDHI JAYATEERTHA STUTIH. Show all posts

Thursday, 2 December 2021

ಜಯತೀರ್ಥ ಜಯತೀರ್ಥ ದಯವಾರಿಧಿ ankita shyamasundara JAYATEERTHA JAYATEERTHA DAYAVAARIDHI JAYATEERTHA STUTIH


ಜಯತೀರ್ಥ ಜಯತೀರ್ಥ ಪ


ದಯವಾರಿಧಿ ಭವ | ಭಯಹರ ಗುರುವರ ಅ.ಪ


ಕಾಗಿಣಿ ತಟ ಸ್ಥಿತ | ಮೇಘನಾಥಪುರ

ಆಗರವೆನಿಸಿದ ಯೋಗಿವರೇಣ್ಯ 1


ತತ್ವಗಳರ್ಥವ | ಪುಸ್ತಕ ಭಾರವ

ಎತ್ತಿನ ರೂಪದಿ | ಪೊತ್ತ ಮಹಾತ್ಮ 2


ಮರುತ ಸುಶಾಸ್ತ್ರಕೆ | ವಿರಚಿಸಿ ಟೀಕೆಯ

ಮುರಿದು ಕುಭಾಷ್ಯವ | ಮೆರೆದ ಮಹಂತ 3


ನೆರೆನಂಬಿದೆ ಶ್ರೀ | ಹರಿನಾಮವ

ನಿರುತಗರಿದು ಪೊರಿ | ನರನವತಾರಿ 4


ಭೀಮ ಭವಾಟವಿ | ಧೂಮ ಶ್ರೀ

ಶಾಮಸುಂದರ ಪ್ರೇಮದ ದಾಸ 5

***

ಜಯತೀರ್ಥ ಜಯತೀರ್ಥ  || pa||


ದಯವಾರಿಧಿ ಭವಭಯಹರ ಗುರುವರ || a. Pa ||


ಕಾಗಿಣಿ ತಟಸ್ಥಿತ ಮೇಘನಾಥಪುರ 

ಆಗರವೆನಿಸಿದ ಯೋಗಿವರೇಣ್ಯ || 1 ||


ತತ್ವಗಳರ್ಥದ ಪುಸ್ತಕ ಭಾರವ

ಎತ್ತಿನ ರೂಪದಿ ಪೊತ್ತ ಮಹಾತ್ಮಾ || 2 || 


ಮರುತ ಶಾಸ್ತ್ರಕೆ ವಿರಚಿಸಿ ಟೀಕೆಯ 

ಮುರಿದು ಕುಭಾಷ್ಯವ ಮೆರೆದ ಮಹಂತ || 3 || 


ನೆರೆನಂಬಿದೆ ಶ್ರೀ ನರಹರಿ ನಾಮವ 

ನಿರುತೆಗರೆದು ಪೊರಿ ನರನವತಾರಿ || 4 || 


ಭೀಮ ಭವಾಟವಿ ಧೂಮಕೇತು ಶ್ರೀ 

ಶ್ಯಾಮಸುಂದರನ ಪ್ರೇಮದ ದಾಸ || 5 ||

***


Jayatīrtha jayatīrtha  || pa||


dayavāridhi bhavabhayahara guruvara || a. Pa ||


kāgiṇi taṭasthita mēghanāthapura 

āgaravenisida yōgivarēṇya  || 1 ||


tatvagaḷarthada pustakabhārava 

ettina rūpadi potta mahātmā   || 2 || 


marutaśāstrake viracisi ṭīkeya 

muridu kubhāṣyava mereda mahanta  || 3 || 


nerenambide śrī narahari nāmava 

nirutegaredu pori naranavatāri  || 4 || 


bhīmabhavāṭavi dhūmakētu śrī 

śyāmasundarana prēmada dāsa || 5 ||

***