ರಾಗ - : ತಾಳ -
ವಿದಿತ ದೈವಗಳೆಲ್ಲ ವಿಷ್ಣುವಿನ ಹಿಂದೆ ll ಪ ll
ಅದಕೆ ನಾ ಫಣಿಫಣವ ಕೈಯಾಗೆ ಪಿಡಿವೆ ll ಅ ಪ ll
ಸಕಲ ತೀರ್ಥಗಳೆಲ್ಲ ಸಾಲಿಗ್ರಾಮದ ಹಿಂದೆ
ಸಕಲ ವೃಕ್ಷಗಳೆಲ್ಲ ಶ್ರೀ ತುಳಸಿ ಹಿಂದೆ
ಸಕಲ ದ್ರವ್ಯಗಳೆಲ್ಲ ವಿದ್ಯಾದ್ರವ್ಯದ ಹಿಂದೆ
ಪ್ರಕಟ ಗ್ರಂಥಗಳೆಲ್ಲ ಭಾರತದ ಹಿಂದೆ ll 1 ll
ಮತಗಳೆಲ್ಲವು ಮಧ್ವಮತ ಸುಸಾರದ ಹಿಂದೆ
ಇತರ ವರ್ಣಗಳೆಲ್ಲ ವಿಪ್ರರ ಹಿಂದೆ
ವ್ರತಗಳೆಲ್ಲವು ಹರಿವಾಸರ ವ್ರತದ ಹಿಂದೆ
ಅತಿಶಯದ ದಾನಗಳು ಅನ್ನದಾನದ ಹಿಂದೆ ll 2 ll
ಉತ್ತಮ ಗುಣಗಳೆಲ್ಲ ಔದಾರ್ಯಗುಣದ ಹಿಂದೆ
ಮತ್ತೆ ಕರ್ಮಗಳೆಲ್ಲ ಮಜ್ಜನದ ಹಿಂದೆ
ನಿತ್ಯ ನೇಮಗಳೆಲ್ಲ ಗಾಯತ್ರಿ ಜಪದಾ ಹಿಂದೆ
ಚಿತ್ತಜನಯ್ಯ ಶ್ರೀ ಪುರಂದರವಿಟ್ಠಲ ll 3 ll
***