Showing posts with label ಹರಿಕಥಾಮೃತ ಸವಿಯ ಹರಿದಾಸರಲ್ಲದೆ purandara vittala. Show all posts
Showing posts with label ಹರಿಕಥಾಮೃತ ಸವಿಯ ಹರಿದಾಸರಲ್ಲದೆ purandara vittala. Show all posts

Saturday, 7 December 2019

ಹರಿಕಥಾಮೃತ ಸವಿಯ ಹರಿದಾಸರಲ್ಲದೆ purandara vittala

ರಾಗ ಮೋಹನ. ಅಟ ತಾಳ

ಹರಿ ಕಥಾಮೃತ ಸೇವೆ ಹರಿದಾಸರಲ್ಲದಲೆ
ದುರುಳ ಮೂಢರು ಬಲ್ಲರೆ ||ಪ||

ಸ್ತನ್ಯಪಾನದ ಸವಿಯ ಚಿಣ್ಣರರಿಯುವಂತೆ
ಮಣ್ಣು ಬೊಂಬೆಯು ಬಲ್ಲುದೆ
ಅನ್ನಪಾನದ ಸವಿಯ ಕೊನೆನಾಲಿಗರಿವಂತೆ
ಅಣಿ ಮಾಡಿ ಕೊಡುವಂಥ ಕರ ಬಲ್ಲುದೆ ||

ನವನೀರದಾರ್ಭಟಕೆ ನವಿಲುಗಳು ನಲಿವಂತೆ
ಕಾವುಕಾವೆಂಬ ಕಾಕವು ನಲಿವುವೆ
ದಿವಸಾಧಿಪತಿಯುದಿಸಲರಳುವಬ್ಜಗಳಂತೆ
ದಿವಸಾಂಧ ಪಕ್ಷಿಗಳು ಹರುಷಿಸುವುವೆ ||

ಮುಲ್ಲೆ ಮಲ್ಲಿಗೆ ಮುಡಿಯಬಲ್ಲ ಮಾನವರಂತೆ
ಭಲ್ಲೂಕಗಳು ಅದರ ಬಗೆ ಬಲ್ಲವೆ
ಫುಲ್ಲಾಕ್ಷ ರಘುಪತಿ ಪುರಂದರವಿಟ್ಠಲನ
ಬಲ್ಲ ಸಜ್ಜನರಂತೆ ಖುಲ್ಲರರಿಯುವರೆ ||
***

pallavi

hari kathAmrta sEve haridAsaralladale duruLa mUDharu ballare

caraNam 1

stanyapAnada saviya ciNNarariyuvante maNNu bombeyu ballude
annapAnada saviya kone nAligarivante aNi mADi koDuvantha kara ballude

caraNam 2

navanIradArbhaTake navilugaLu nalivante kAvukAvemba kAkavu nalivuve
divasAdhipati yudisalaraLu ebjagaLante divasAndha pakSigaLu hrSisuvuve

caraNam 3

mulle mallige muDiyaballa mAnavarante bhallUkagaLu adhara bage ballave
pullAkSa raghupati purandara viTTalana balla sajjanarante khullaraiyuvare
***

ಹರಿಕಥಾಮೃತ ಸವಿಯ ಹರಿದಾಸರಲ್ಲದೆ 
ದುರುಳಮಾನವರ ದರಪರಿಬಲ್ಲಿರೇನಯ್ಯಪ.

ಸ್ತನ ಪಾನದ ರುಚಿಯ ಚಿಣ್ಣರು ಬಲ್ಲರಲ್ಲದೆಮೊಣ್ಣ ಬೊಂಬೆಗಳದರ ಬಗೆ ಬಲ್ಲುವೆ ||ಅನ್ನಪಾನದ ರುಚಿಯ ಕೊನೆ ನಾಲಿಗೆಯಲ್ಲದೆಅಣಿಮಾಡಿಕೊಡುವ ಆಕರಬಲ್ಲುದೇನಯ್ಯ1

ನವನೀರದಾರ್ಭಟಕೆ ನವಿಲುಗಳು ನಲಿವಂತೆಕಾವು ಕಾವೆಂಬ ಕಾಕವು ಬಲ್ಲುದೆ ? ||ದಿವಸಕರನುದಯಿಸಲು ಅರಳುವಬ್ಜಗಳಂತೆದಿವಸಾಂಧ ಪಕ್ಷಿಗಳು ಬಗೆಬಲ್ಲುವೇನಯ್ಯ 2

ಮೊಲ್ಲೆ - ಮಲ್ಲಿಗೆ ಮುಡಿಯಬಲ್ಲ ಮಾನವರಂತೆಭಲ್ಲೂಕಗಳು ಅದರ ಬಗೆ ಬಲ್ಲುವೆ ?ಫುಲ್ಲಾಕ್ಷ ಶ್ರೀ ಪುರಂದರವಿಠಲರಾಯನನುಬಲ್ಲ ಮಾನವರಲ್ಲದೆಲ್ಲರೂ ಬಲ್ಲರೆ ? 3
*********