ಕಾಖಂಡಕಿ ಶ್ರೀ ಕೃಷ್ಣದಾಸರು
ಜಗದ ಜೀವರನುದರದಲಿಟ್ಟು ಕರುಣಾಮೃತದಿ | ಬಗೆಬಗೆಲಿ ಸಲಹುಲೇಹ ತಾಯಿ ನೀನೇ | ಮಗುಳೆ ಮೂಲ ಪ್ರಕೃತಿಯಲಿ ಬೀಜವಿಟ್ಟು ಮೂ | ಜಗವ ಪುಟ್ಟಸುತಿಹ ತಂದೆ ನೀನೇ | ಮಿಗಿಲಾಗಿ ಬಂದ ದುರಿತಂಗಳ ನಿವಾರಿಸುವ | ಭಾಗವತರಿಗೆ ಅನಿಮಿತ್ತ ಬಂಧು ನೀನೇ 1
ಸುಗಮದಧಿ ದೈವತಾ ರೂಪದಲ್ಲಿ ಕರಣೇಂದ್ರಿ- ನಿಗಮಾಗ ಮಗಳಿಂದ ಸ್ತುತಿಸುತ ಸುಜ್ಞಾನ | ದುಗಮದಿರುವ ಗುರುರೂಪ ನೀನೇ | ಭಕುತಿಯಲಿ ವಿಧಿಮರುತ ಶಿವಗರುಡ ಫಣಿಪೇಂದ್ರಾ | ದಿಗಳು ಪೂಜಿಪ ಕುಲದೈವ ನೀನೇ 2
ಹಲವು ಜನುಮದಿ ಸಂಗಡಿಗನಾಗಿ ಸಮತೆಯಲಿ | ಸಲಿಸಿ ಬಯಕೆಯ ಕಾವ ಗೆಳೆಯ ನೀನೇ | ಒಲಿದನ್ನ ವಸ್ತ್ರ ಸಂಪದ ಸಕಲವರ ಪುಣ್ಯ | ಫಲದಂತೆ ನೀಡುತಿಹ ಸ್ವಾಮಿನೀನೇ | ಜಲಜಾಕ್ಷ ಅದುಕಾರಣ ಎನಗೆ ಸಕಲವು ನೀನೇ | ಸಲಹು ಭಕುತಿಯನಿತ್ತು ಗುರು ಮಹಿಪತಿ ಪ್ರಭು3
****