Showing posts with label ನಾನೇನು ಮಾಡಲಯ್ಯ ಎನ್ನಯ ಮನ ನಿನ್ನ ಧ್ಯಾನಿಸಲೊಲ್ಲದೂ narahari P. Show all posts
Showing posts with label ನಾನೇನು ಮಾಡಲಯ್ಯ ಎನ್ನಯ ಮನ ನಿನ್ನ ಧ್ಯಾನಿಸಲೊಲ್ಲದೂ narahari P. Show all posts

Thursday, 5 August 2021

ನಾನೇನು ಮಾಡಲಯ್ಯ ಎನ್ನಯ ಮನ ನಿನ್ನ ಧ್ಯಾನಿಸಲೊಲ್ಲದೂ ankita narahari P

 ..

kruti by pradyumna teertha ಪ್ರದ್ಯುಮ್ನತೀರ್ಥರು


ನಾನೇನು ಮಾಡಲಯ್ಯ ಎನ್ನಯ ಮನ ನಿನ್ನ

ಧ್ಯಾನಿಸಲೊಲ್ಲದೂ ಪ


ಶ್ರೀನಿವಾಸನ ದಯ ಕಾಣುವೋಧ್ಹ್ಯಾಂಗಿನ್ನು

ನೀನೆ ದಯಮಾಡೋ ಗುರು ರಾಘವೇಂದ್ರ ಅ.ಪ

ಕೀರ್ತಿಸದೆ ನಿನ್ನ ವ್ಯರ್ಥ ಚಿಂತೆಯ ಮಾಡಿ

ಪಾರ್ಥಸಾರಥಿ ಮಾರ್ಗಕ್ಹೊರ್ತಾದೆ

ನಾ ಮರ್ತೆ ನಿಜಸೌಖ್ಯವನು ಬೆರ್ತೆ ಅನ್ಯರ ಸತಿಯ

ಸಾರ್ಥಕಾಗದೇ ಪೋಯಿತೆನ್ನ ಆಯು 1


ಮಾಂಸದಾಸೆಗೆ ಮೀನು ಹಿಂಸೆಪಡುತಿರುವಂತೆ

ಸಂಸಾರದಲಿ ಸಿಕ್ಕೆ ಕಂಸಾರಿ ಪ್ರಿಯ

ಹಂಸರೊಂದಿತ ಎನ್ನ ಸಂಶಯವ ಪರಿಹರಿಸಿ

ಸಂಶಾಂತ ಮತಿ ನೀಡೋ ಸಂಶಯ ದೂರನೇ 2


ಎಷ್ಟು ಪೇಳಲಿ ಎನ್ನ ದುಷ್ಟ ಕರ್ಮಗಳನ್ನು

ಜೇಷ್ಟ ದೂತನೆ ಎನ್ನ ಕಷ್ಟ ಬಿಡಿಸೋ

ವೃಷ್ಣಿಸಖಪ್ರಿಯ ಮನ ತೃಷ್ಣಗಳನೆ ಕಳೆದು

ಶ್ರೇಷ್ಠಾ ನರಹರಿ ಚರಣಾಭೀಷ್ಟವ ನೀಡೋ 3

***