Showing posts with label ಶ್ರೀಗುರುವೆ ತಾಯಿ ತಂದೆನಗ ನೀನು mahipati. Show all posts
Showing posts with label ಶ್ರೀಗುರುವೆ ತಾಯಿ ತಂದೆನಗ ನೀನು mahipati. Show all posts

Wednesday, 1 September 2021

ಶ್ರೀಗುರುವೆ ತಾಯಿ ತಂದೆನಗ ನೀನು ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಶ್ರೀಗುರುವೆ ತಾಯಿ ತಂದೆನಗ ನೀನು ಪ  


ತಾಯಿ ತಂದೆನಗ ನೀ ಬಾಹ್ಯಾಂತ್ರ ಪರಿಪೂರ್ಣ ಸಾಯೋಜ್ಯ ಸದ್ಗುರುನಾಥ ನೀನೆ ಸಂಜೀವ ಸಾಕ್ಷಾತ ನೀನೆ ಕಾವ ಕರುಣಾಳು ವರದಾತ ನೀನೆ ಇಹಪರದೊಳು ಸಕಳಾರ್ಥ ನೀನೆ 1 

ಕರುಣ ಆನಂದದಲಿ ಹೊರೆದು ಸಲಹುವ ಮೂರ್ತಿ ಪರಮ ಜೀವದ ಅತಿ ಮೈತ್ರ ನೀನೆ ಸರ್ವ ಙÁ್ಞನಿಗಳ ಕುಲಗೋತ್ರ ನೀನೆ ದ್ರವ್ಯ ಧನವನು ಸಂಚಿತಾರ್ಥ ನೀನೆ ಪೂರ್ವಪ್ರಾಚೀನ ಪುಣ್ಯಸೂತ್ರ ನೀನೆ 2 

ಬಾಲಕನ ಮ್ಯಾಲೆ ದಯಮಾಡಿ ಪಾಲಿಸುತೀಹ್ಯ ಕುಲಕೋಟಿ ಬಂಧುಬಳಗ ನೀನೆ ಮೂಲಪುರಷನ ಋಷಿದೈವ ನೀನೆ ಪರಿ ಬಲವು ಇಳಯೊಳಗೆ ನೀನೆ ಸಲಹುತಿಹ ಮಹಿಪತಿಸ್ವಾಮಿ ನೀನೆ 3

***