Audio by Mrs. Nandini Sripad
ರಚನೆ : ಶ್ರೀ ಜಗನ್ನಾಥ ದಾಸರು
for saahitya click ಹರಿಕಥಾಮೃತಸಾರ ಸಂಧಿ 1 to 32
ಶ್ರೀಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ
ನೈವೇದ್ಯ ಪ್ರಕರಣ ಸಂಧಿ 31 ರಾಗ ಹಿಂದೋಳ
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||
ಲೆಕ್ಕಿಸದೆ ಲಕುಮಿಯನು ಬೊಮ್ಮನ ಪೊಕ್ಕಳಿಂದಲಿ ಪಡೆದ
ಪೊಸ ಪೊಂಬಕ್ಕಿದೇರನು ಪಡೆದ ಅವಯವಗಳಿಂದ ದಿವಿಜರನಾ
ಮಕ್ಕಳಂದದಿ ಪೊರೆವ ಸರ್ವದ ರಕ್ಕಸಾಂತಕ
ರಣದೊಳಗೆ ನಿರ್ದುಃಖ ಸುಖಮಯ ಕಾಯ್ದ ಪಾರ್ಥನ ಸೂತನೆಂದೆನಿಸಿ||1||
ದೋಷ ಗಂಧ ವಿದೂರ ನಾನಾ ವೇಷಧಾರಿ ವಿಚಿತ್ರ ಕರ್ಮ
ಮನೀಷಿ ಮಾಯಾ ರಮಣ ಮಧ್ವಾಂತಃಕರಣ ರೂಢ
ಶೇಷಸಾಯಿ ಶರಣ್ಯ ಕೌಸ್ತುಭ ಭೂಷಣ ಸುಕಂಧರ
ಸದಾ ಸಂತೋಷ ಬಲ ಸೌಂದರ್ಯ ಸಾರನ ಮಹಿಮೆಗೆ ಏನೆಂಬೆ||2||
ಸಾಶನಾನ ಶನೇ ಅಭೀಯೆಂಬ ಈ ಶ್ರುತಿ ಪ್ರತಿಪಾದ್ಯನೆನಿಸುವ
ಕೇಶವನ ರೂಪದ್ವಯವ ಚಿದ್ದೇಹದ ಒಳಹೊರಗೆ
ಬೇಸರದೆ ಸದ್ಭಕ್ತಿಯಿಂದ ಉಪಾಸನೆಯಗೈಯುತಲಿ ಬುಧರು
ಹುತಾಶನನಯೊಳಿಪ್ಪನೆಂದು ಅನವರತ ತುತಿಸುವರು||3||
ಸಕಲ ಸದ್ಗುಣ ಪೂರ್ಣ ಜನ್ಮಾದಿ ಅಖಿಳ ದೋಷ ವಿದೂರ
ಪ್ರಕಟಾಪ್ರಕಟ ಸದ್ವ್ಯಾಪಾರಿ ಗತ ಸಂಸಾರಿ ಕಂಸಾರಿ
ನಕುಲ ನಾನಾ ರೂಪ ನಿಯಾಮಕ ನಿಯಮ್ಯ ನಿರಾಮಯ
ರವಿ ಪ್ರಕರ ಸನ್ನಿಭ ಪ್ರಭು ಸದಾ ಮಾಂ ಪಾಹಿ ಪರಮಾತ್ಮ||4||
ಚೇತನಾಚೇತನ ಜಗತ್ತಿನೊಳು ಆತನನು ತಾನಾಗಿ
ಲಕ್ಷ್ಮೀನಾಥ ಸರ್ವರೊಳಿಪ್ಪ ತತ್ತದ್ರೂಪಗಳ ಧರಿಸಿ
ಜಾತಿಕಾರನ ತೆರದಿ ಎಲ್ಲರ ಮಾತಿನೊಳಗಿದ್ದು
ಅಖಿಳ ಕರ್ಮವ ತಾ ತಿಳಿಸಿ ಕೊಳ್ಳದಲೇ ಮಾಡಿಸಿ ನೋಡಿ ನಗುತಿಪ್ಪ||5||
ವೀತಭಯ ವಿಜ್ಞಾನ ದಾಯಕ ಭೂತ ಭವ್ಯ ಭವತ್ಪ್ರಭು
ಖಳಾರಾತಿ ಖಗ ವರ ವಹನ ಕಮಲಾಕಾಂತ ನಿಶ್ಚಿಂತ
ಮಾತರಿಶ್ವ ಪ್ರಿಯ ಪುರಾತನ ಪೂತನಾ ಪ್ರಾಣಾಪಹಾರಿ
ವಿಧಾತೃ ಜನಕ ವಿಪಶ್ಚಿತ ಜನಪ್ರಿಯ ಕವಿಗೇಯಾ||6||
ದುಷ್ಟ ಜನ ಸಂಹಾರಿ ಸರ್ವೋತ್ಕೃಷ್ಟ ಮಹಿಮ ಸಮೀರನುತ
ಸಕಲ ಇಷ್ಟದಾಯಕ ಸ್ವರತ ಸುಖಮಯ ಮಮ ಕುಲಸ್ವಾಮಿ
ಹೃಷ್ಟ ಪುಷ್ಟ ಕನಿಷ್ಠ ಸೃಷ್ಟಿ ಆದಿ ಅಷ್ಟಕರ್ತ ಕರೀಂದ್ರ ವರದ
ಯಥೇಷ್ಟ ತನು ಉನ್ನತ ಸುಕರ್ಮಾ ನಮಿಪೆನು ಅನವರತ||7||
ಪಾಕಶಾಸನ ಪೂಜ್ಯ ಚರಣ ಪಿನಾಕಿ ಸನ್ನುತ ಮಹಿಮ
ಸೀತಾ ಶೋಕ ನಾಶನ ಸುಲಭ ಸುಮುಖ ಸುವರ್ಣವರ್ಣ ಸುಖಿ
ಮಾಕಳತ್ರ ಮನೀಷಿ ಮಧುರಿಪು ಏಕಮೇವಾದ್ವಿತೀಯ ರೂಪ
ಪ್ರತೀಕ ದೇವಗಣಾಂತರಾತ್ಮಕ ಪಾಲಿಸುವುದೆಮ್ಮ||8||
ಅಪ್ರಮೇಯ ಅನಂತರೂಪ ಸದಾ ಪ್ರಸನ್ನ ಮುಖಾಬ್ಜ
ಮುಕ್ತಿ ಸುಖಪ್ರದಾಯಕ ಸುಮನಸ ಆರಾಧಿತ ಪದಾಂಭೋಜ
ಸ್ವಪ್ರಕಾಶ ಸ್ವತಂತ್ರ ಸರ್ವಗ ಕ್ಷಿಪ್ರ ಫಲದಾಯಕ ಕ್ಷಿತೀಶ
ಯದು ಪ್ರವೀರ ವಿತರ್ಕ್ಯ ವಿಶ್ವಸು ತೈಜಸ ಪ್ರಾಜ್ಞ||9||
ಗಾಳಿ ನಡೆವಂದದಲಿ ನೀಲ ಘನಾಳಿ ವರ್ತಿಸುವಂತೆ
ಬ್ರಹ್ಮ ತ್ರಿಶೂಲಧರ ಶಕ್ರಾರ್ಕ ಮೊದಲಾದ ಅಖಿಳ ದೇವಗಣ
ಕಾಲಕರ್ಮ ಗುಣಾಭಿಮಾನಿ ಮಹಾ ಲಕುಮಿ ಅನುಸರಿಸಿ ನಡೆವರು
ಮೂಲ ಕಾರಣ ಮುಕ್ತಿ ದಾಯಕನು ಶ್ರೀಹರಿಯೆನಿಸಿಕೊಂಬ||10||
ಮೋಡ ಕೈಬೀಸಣಿಕೆಯಿಂದಲಿ ಓಡಿಸುವೆನೆಂಬನ ಪ್ರಯತ್ನವು
ಕೂಡುವುದೆ ಕಲ್ಪಾಂತಕೆ ಆದರು ಲಕುಮಿವಲ್ಲಭನು ಜೋಡು ಕರ್ಮವ ಜೀವರೊಳು
ತಾ ಮಾಡಿ ಮಾಡಿಸಿ ಫಲಗಳುಣಿಸುವ
ಪ್ರೌಢರಾದವರು ಇವನ ಭಜಿಸಿ ಭವಾಬ್ಧಿ ದಾಟುವರು||11||
ಕ್ಷೇಶ ಮೋಹ ಅಜ್ಞಾನ ದೋಷ ವಿನಾಶಕ ವಿರಿಂಚಿ ಅಂಡದೊಳಗೆ
ಆಕಾಶದ ಉಪಾದಿಯಲಿ ತುಂಬಿಹ ಎಲ್ಲ ಕಾಲದಲಿ
ಘಾಸಿಗೊಳಿಸದೆ ತನ್ನವರ ಅನಾಯಾಸ ಸಂರಕ್ಷಿಸುವ
ಮಹಾ ಕರುಣಾ ಸಮುದ್ರ ಪ್ರಸನ್ನ ವದನಾಂಭೋಜ ಸುರರಾಜ ವಿರಾಜ||12||
ಕನ್ನಡಿಯ ಕೈವಿಡಿದು ನೋಳ್ಪನ ಕಣ್ಣುಗಳು ಕಂಡಲ್ಲಿಗೆರಗದೆ
ತನ್ನ ಪ್ರತಿಬಿಂಬವನೆ ಕಾಂಬುವ ದರ್ಪಣವ ಬಿಟ್ಟು
ಧನ್ಯರು ಇಳೆಯೊಳಗೆ ಎಲ್ಲ ಕಡೆಯಲಿ ನಿನ್ನ ರೂಪವ ನೋಡಿ ಸುಖಿಸುತ
ಸನ್ನುತಿಸುತ ಆನಂದ ವಾರಿಧಿಯೊಳಗೆ ಮುಳುಗಿಹರು||13||
ಅನ್ನ ಮಾನಿ ಶಶಾಂಕನೊಳು ಕಾರುಣ್ಯ ಸಾಗರ ಕೇಶವನು
ಪರಮಾನ್ನದೊಳು ಭಾರತಿಯು ನಾರಾಯಣನು
ಭಕ್ಷ್ಯದೊಳು ಸೊನ್ನಗದಿರನು ಮಾಧವನು
ಶ್ರುತಿ ಸನ್ನುತ ಶ್ರೀಲಕ್ಷ್ಮೀ ಘೃತದೊಳು ಮಾನ್ಯ ಗೋವಿಂದ ಅಭಿಧನು ಇರುತಿಪ್ಪ ಎಂದೆಂದು||14||
ಕ್ಷೀರಮಾನಿ ಸರಸ್ವತೀ ಜಗತ್ಸಾರ ವಿಷ್ಣುವ ಚಿಂತಿಸುವುದು
ಸರೋರುಹಾಸನ ಮಂಡಿಗೆಯೊಳು ಇರುತಿಪ್ಪ ಮಧು ವೈರಿ
ಮಾರುತನು ನವನೀತದೊಳು ಸಂಪ್ರೇರಕ ತ್ರಿವಿಕ್ರಮನು
ದಧಿಯೊಳು ವಾರಿನಿಧಿ ಚಂದ್ರಮರೊಳಗೆ ಇರುತಿಪ್ಪ ವಾಮನನು||15||
ಗರುಡ ಸೂಪಕೆ ಮಾನಿ ಶ್ರೀ ಶ್ರೀಧರನ ಮೂರುತಿ
ಪತ್ರಶಾಖಕೆ ವರನೆನಿಪ ಮಿತ್ರಾಖ್ಯ ಸೂರ್ಯನು ಹೃಶೀಕಪನ ಮೂರ್ತಿ
ಉರಗ ರಾಜನು ಫಲ ಸುಶಾಖಕೆ ವರನೆನಿಸುವನು
ಪದ್ಮನಾಭನ ಸ್ಮರಿಸಿ ಭುಂಜಿಸುತಿಹರು ಬಲ್ಲವರು ಎಲ್ಲ ಕಾಲದಲಿ||16||
ಗೌರಿ ಸರ್ವ ಆಮ್ಲಸ್ಥಳು ಎನಿಪಳು ಶೌರಿ ದಾಮೋದರನ ತಿಳಿವುದು
ಗೌರಿಪ ಅನಾಮ್ಲಸ್ಥ ಸಂಕರುಷಣನ ಚಿಂತಿಪುದು
ಸಾರಶರ್ಕರ ಗುಡದೊಳಗೆ ವೃತ್ರಾರಿ ಇರುತಿಹ
ವಾಸುದೇವನ ಸೂರಿಗಳು ಧೇನಿಪರು ಪರಮಾದರದಿ ಸರ್ವತ್ರ||17||
ಸ್ಮರಿಸು ವಾಚಸ್ಪತಿಯ ಸೂಪಸ್ಕರದೊಳಗೆ ಪ್ರದ್ಯುಮ್ನನು ಇಪ್ಪನು
ನಿರಯಪತಿ ಯಮಧರ್ಮ ಕಾಟು ದ್ರವ್ಯದೊಳಗೆ ಅನಿರುದ್ಧ
ಸರಷಪ ಶ್ರೀ ರಾಮಠ ಏಳದಿ ಸ್ಮರಣ ಶ್ರೀ ಪುರುಷೋತ್ತಮನ
ಕರ್ಪೂರದಿ ಚಿಂತಿಸಿ ಪೂಜಿಸುತಲಿರು ಪರಮ ಭಕುತಿಯಲಿ||18||
ನಾಲಿಗಿಂದಲಿ ಸ್ವೀಕರಿಪ ರಸಪಾಲು ಮೊದಲಾದ ಅದರೊಳಗೆ
ಘೃತ ತೈಲ ಪಕ್ವ ಪದಾರ್ಥದೊಳಗಿಹ ಚಂದ್ರನಂದನನ
ಪಾಲಿಸುವ ಅಧೋಕ್ಷಜನ ಚಿಂತಿಸು
ಸ್ಥೂಲ ಕೂಷ್ಮಾಂಡ ತಿಲ ಮಾಷಜ ಈ ಲಲಿತ ಭಕ್ಷ್ಯದೊಳು ದಕ್ಷನು ಲಕ್ಷ್ಮೀ ನರಸಿಂಹ||19||
ಮನವು ಮಾಷ ಸುಭಕ್ಷ್ಯದೊಳು ಚಿಂತನೆಯ ಮಾಡು ಅಚ್ಯುತನ
ನಿರ್ಋತಿ ಮನೆಯೆನಿಪ ಲವಣದೊಳು ಮರೆಯದೆ ಶ್ರೀ ಜನಾರ್ಧನನ
ನೆನೆವುತಿರು ಫಲ ರಸಗಳೊಳು ಪ್ರಾಣನ ಉಪೇಂದ್ರನ
ವೀಳ್ಯದೆಲೆಯೊಳು ದ್ಯುನದಿ ಹರಿ ರೂಪವನೇ ಕೊಂಡಾಡುತಲೆ ಸುಖಿಸುತಿರು||20||
ವೇದ ವಿನುತಗೆ ಬುಧನು ಸುಸ್ವಾದ ಉದಕ ಅಧಿಪನು ಎನಿಸಿಕೊಂಬನು
ಶ್ರೀದ ಕೃಷ್ಣನ ತಿಳಿದು ಪೂಜಿಸುತಿರು ನಿರಂತರದಿ
ಸಾಧು ಕರ್ಮವ ಪುಷ್ಕರನು ಸುನಿವೇದಿತ ಪದಾರ್ಥಗಳ
ಶುದ್ಧಿಯಗೈದ ಗೋಸುಗ ಹಂಸನಾಮಕಗೆ ಅರ್ಪಿಸುತಲಿಪ್ಪ||21||
ರತಿ ಸಕಲ ಸುಸ್ವಾದು ರಸಗಳ ಪತಿಯೆನಿಸುವಳು ಅಲ್ಲಿ ವಿಶ್ವನು
ಹುತವಹನ ಚೂಲಿಗಳೊಳಗೆ ಭಾರ್ಗವನ ಚಿಂತಿಪುದು
ಕ್ಷಿತಿಜ ಗೋಮಯಜ ಆದಿಯೊಳು ಸಂಸ್ಥಿತ ವಸಂತನ ಋಷಭ ದೇವನ
ತುತಿಸುತಿರು ಸಂತತ ಸದ್ಭಕ್ತಿ ಪೂರ್ವಕದಿ||22||
ಪಾಕ ಕರ್ತೃಗಳೊಳು ಚತುರ್ದಶ ಲೋಕಮಾತೆ ಮಹಾಲಕುಮಿ
ಗತಶೋಕ ವಿಶ್ವಂಭರನ ಚಿಂತಿಪುದು ಎಲ್ಲ ಕಾಲದಲಿ
ಚೌಕ ಶುದ್ಧ ಸುಮಂಡಲದಿ ಭೂ ಸೂಕರಾಹ್ವಯ
ಉಪರಿ ಚೈಲಪ ಏಕದಂತ ಸನತ್ಕುಮಾರನ ಧ್ಯಾನಿಪುದು ಬುಧರು||23||
ಶ್ರೀನಿವಾಸನ ಭೋಗ್ಯ ವಸ್ತುವ ಕಾಣಗೊಡದಂದದಲಿ
ವಿಶ್ವಕ್ಸೇನ ಪರಿಖಾ ರೂಪನಾಗಿಹನು ಅಲ್ಲಿ ಪುರುಷಾಖ್ಯ
ತಾನೇ ಪೂಜಕ ಪೂಜ್ಯನೆನಿಸಿ ನಿಜಾನುಗರ ಸಂತೈಪ
ಗುರು ಪವಮಾನ ವಂದಿತ ಸರ್ವ ಕಾಲಗಳಲ್ಲಿ ಸರ್ವತ್ರ||24||
ನೂತನ ಸಮೀಚೀನ ಸುರಸೋಪೇತ ಹೃದ್ಯ ಪದಾರ್ಥದೊಳು
ವಿಧಿಮಾತೆ ತತ್ತದ್ರಸಗಳೊಳು ರಸ ರೂಪ ತಾನಾಗಿ
ಪ್ರೀತಿ ಪಡಿಸುತ ನಿತ್ಯದಿ ಜಗನ್ನಾಥ ವಿಠಲನ ಕೂಡಿ
ತಾ ನಿರ್ಭೀತಳಾಗಿಹಳು ಎಂದರಿದು ನೀ ಭಜಿಸಿ ಸುಖಿಸುತಿರು||25||
*************
CharikathAmRutasAra gurugaLa karuNadiMdApanitu kELuve
parama BagavadBaktaru idanAdaradi kELuvudu||
lekkisade lakumiyanu bommana pokkaLiMdali paDeda
posa poMbakkidEranu paDeda avayavagaLiMda divijaranA
makkaLaMdadi poreva sarvada rakkasAMtaka
raNadoLage nirduHKa suKamaya kAyda pArthana sUtaneMdenisi||1||
dOSha gaMdha vidUra nAnA vEShadhAri vicitra karma
manIShi mAyA ramaNa madhvAMtaHkaraNa rUDha
SEShasAyi SaraNya kaustuBa BUShaNa sukaMdhara
sadA saMtOSha bala sauMdarya sArana mahimege EneMbe||2||
sASanAna SanE aBIyeMba I Sruti pratipAdyanenisuva
kESavana rUpadvayava ciddEhada oLahorage
bEsarade sadBaktiyiMda upAsaneyagaiyutali budharu
hutASananayoLippaneMdu anavarata tutisuvaru||3||
sakala sadguNa pUrNa janmAdi aKiLa dOSha vidUra
prakaTAprakaTa sadvyApAri gata saMsAri kaMsAri
nakula nAnA rUpa niyAmaka niyamya nirAmaya
ravi prakara sanniBa praBu sadA mAM pAhi paramAtma||4||
cEtanAcEtana jagattinoLu Atananu tAnAgi
lakShmInAtha sarvaroLippa tattadrUpagaLa dharisi
jAtikArana teradi ellara mAtinoLagiddu
aKiLa karmava tA tiLisi koLLadalE mADisi nODi nagutippa||5||
vItaBaya vij~jAna dAyaka BUta Bavya BavatpraBu
KaLArAti Kaga vara vahana kamalAkAMta niSciMta
mAtariSva priya purAtana pUtanA prANApahAri
vidhAtRu janaka vipaScita janapriya kavigEyA||6||
duShTa jana saMhAri sarvOtkRuShTa mahima samIranuta
sakala iShTadAyaka svarata suKamaya mama kulasvAmi
hRuShTa puShTa kaniShTha sRuShTi Adi aShTakarta karIndra varada
yathEShTa tanu unnata sukarmA namipenu anavarata||7||
pAkaSAsana pUjya caraNa pinAki sannuta mahima
sItA SOka nASana sulaBa sumuKa suvarNavarNa suKi
mAkaLatra manIShi madhuripu EkamEvAdvitIya rUpa
pratIka dEvagaNAntarAtmaka pAlisuvudemma||8||
apramEya anantarUpa sadA prasanna muKAbja
mukti suKapradAyaka sumanasa ArAdhita padAMBOja
svaprakASa svatantra sarvaga kShipra PaladAyaka kShitISa
yadu pravIra vitarkya viSvasu taijasa prAj~ja||9||
gALi naDevandadali nIla GanALi vartisuvante
brahma triSUladhara SakrArka modalAda aKiLa dEvagaNa
kAlakarma guNABimAni mahA lakumi anusarisi naDevaru
mUla kAraNa mukti dAyakanu SrIhariyenisikoMba||10||
mODa kaibIsaNikeyindali ODisuveneMbana prayatnavu
kUDuvude kalpAntake Adaru lakumivallaBanu jODu karmava jIvaroLu
tA mADi mADisi PalagaLuNisuva
prauDharAdavaru ivana Bajisi BavAbdhi dATuvaru||11||
kShESa mOha aj~jAna dOSha vinASaka virinci anDadoLage
AkASada upAdiyali tuMbiha ella kAladali
GAsigoLisade tannavara anAyAsa saMrakShisuva
mahA karuNA samudra prasanna vadanAMBOja surarAja virAja||12||
kannaDiya kaiviDidu nOLpana kaNNugaLu kanDalligeragade
tanna pratibiMbavane kAMbuva darpaNava biTTu
dhanyaru iLeyoLage ella kaDeyali ninna rUpava nODi suKisuta
sannutisuta Ananda vAridhiyoLage muLugiharu||13||
anna mAni SaSAnkanoLu kAruNya sAgara kESavanu
paramAnnadoLu BAratiyu nArAyaNanu
BakShyadoLu sonnagadiranu mAdhavanu
Sruti sannuta SrIlakShmI GRutadoLu mAnya gOviMda aBidhanu irutippa endendu||14||
kShIramAni sarasvatI jagatsAra viShNuva cintisuvudu
sarOruhAsana manDigeyoLu irutippa madhu vairi
mArutanu navanItadoLu saMprEraka trivikramanu
dadhiyoLu vArinidhi candramaroLage irutippa vAmananu||15||
garuDa sUpake mAni SrI SrIdharana mUruti
patraSAKake varanenipa mitrAKya sUryanu hRuSIkapana mUrti
uraga rAjanu Pala suSAKake varanenisuvanu
padmanABana smarisi Bunjisutiharu ballavaru ella kAladali||16||
gauri sarva AmlasthaLu enipaLu Sauri dAmOdarana tiLivudu
gauripa anAmlastha sankaruShaNana cintipudu
sAraSarkara guDadoLage vRutrAri irutiha
vAsudEvana sUrigaLu dhEniparu paramAdaradi sarvatra||17||
smarisu vAcaspatiya sUpaskaradoLage pradyumnanu ippanu
nirayapati yamadharma kATu dravyadoLage aniruddha
saraShapa SrI rAmaTha ELadi smaraNa SrI puruShOttamana
karpUradi cintisi pUjisutaliru parama Bakutiyali||18||
nAligindali svIkaripa rasapAlu modalAda adaroLage
GRuta taila pakva padArthadoLagiha candranandanana
pAlisuva adhOkShajana cintisu
sthUla kUShmAnDa tila mAShaja I lalita BakShyadoLu dakShanu lakShmI narasiMha||19||
manavu mASha suBakShyadoLu cintaneya mADu acyutana
nir^^Ruti maneyenipa lavaNadoLu mareyade SrI janArdhanana
nenevutiru Pala rasagaLoLu prANana upEndrana
vILyadeleyoLu dyunadi hari rUpavanE konDADutale suKisutiru||20||
vEda vinutage budhanu susvAda udaka adhipanu enisikoMbanu
SrIda kRuShNana tiLidu pUjisutiru nirantaradi
sAdhu karmava puShkaranu sunivEdita padArthagaLa
Suddhiyagaida gOsuga haMsanAmakage arpisutalippa||21||
rati sakala susvAdu rasagaLa patiyenisuvaLu alli viSvanu
hutavahana cUligaLoLage BArgavana cintipudu
kShitija gOmayaja AdiyoLu saMsthita vasaMtana RuShaBa dEvana
tutisutiru saMtata sadBakti pUrvakadi||22||
pAka kartRugaLoLu caturdaSa lOkamAte mahAlakumi
gataSOka viSvaMBarana cintipudu ella kAladali
cauka Suddha sumanDaladi BU sUkarAhvaya
upari cailapa Ekadanta sanatkumArana dhyAnipudu budharu||23||
SrInivAsana BOgya vastuva kANagoDadaMdadali
viSvaksEna pariKA rUpanAgihanu alli puruShAKya
tAnE pUjaka pUjyanenisi nijAnugara santaipa
guru pavamAna vandita sarva kAlagaLalli sarvatra||24||
nUtana samIcIna surasOpEta hRudya padArthadoLu
vidhimAte tattadrasagaLoLu rasa rUpa tAnAgi
prIti paDisuta nityadi jagannAtha viThalana kUDi
tA nirBItaLAgihaLu endaridu nI Bajisi suKisutiru||25||
*********