ಧನ್ಯನಾಗೆಲೊ ಮುನ್ನ ಹರಿಯ ಕಾ
ರುಣ್ಯವನೆ ಪಡೆದು ಮಾನವನೆ ಪ
ಇನ್ನು ಸಂಸ್ಮøತಿಯ ಬನ್ನ ಬಿಡಿಸುವ
ಪನ್ನಗಾರಿ ಧ್ವಜನನ್ನು ಧ್ಯಾನಿಸುತ ಅ.ಪ
ಕಣ್ಣಿನಿಂದಲಿ ನೋಡು ಹರಿಯಲಾವಣ್ಯ ಮೂರ್ತಿಯನು
ಕರ್ಣದಿಂದಲಿ ಕೇಳು ಹರಿಯ ಪಾವನ್ನ ಕೀರ್ತಿಯನು
ಅನ್ಯವಾರ್ತೆಗಳಾಡದೆ ವದನದಿ ಘನ್ನ ಹರಿಯಗಣಗಳನ್ನೇ
ಬಣ್ಣಿಸುತ 1
ಹಸ್ತವೆರಡು ಹರಿಮಂದಿರ ಮಾರ್ಜನಕೃತ್ಯ ಮಾಡುತಿರಲಿ
ಮತ್ತೆ ಪಾದಗಳು ಚಿತ್ತಜನಯ್ಯನ ಕ್ಷೇತ್ರ ತಿರುಗುತಿರಲಿ
ಚಿತ್ತವಿರಲಿ ಆಧ್ಯಾತ್ಮ ತತ್ವದಲಿ ಮತ್ತನಾಗದಲೆ
ಭೃತ್ಯನಾಗಿ ಬಲು 2
ಇಂತು ಪಡಿಯೊ ಶಿರಿಕಾಂತನಲ್ಲಿ ಏಕಾಂತ ಭಕ್ತಿಯನು
ಸಂತತ ಹರಿಗುಣ ಚಿಂತನದಿ ವಿಷಯ
ಭ್ರಾಂತಿಯ ಬಿಡು ನೀನು
ಶಾಂತಮನದಿ ಗುರುಮಧ್ವಮತದ ಸಿದ್ಧಾಂತ
ಪೇಳುವ ಮಹಂತರ ಸೇವಿಸಿ 3
ಸಾರ್ಥವಿದೆ ತಿಳಿ ಪಾರ್ಥಸಖನು ಸರ್ವತ್ರ ಇಹನೆಂದು
ಗಾತ್ರದೊಳು ಪ್ರತ್ಯಗಾತ್ಮನಲ್ಲಿ ಸದ್ಭಕ್ತಿಮಾಡು ತಿಳಿದು
ಮತ್ರ್ಯ ಜನ್ಮಕಿದು ಸಾರ್ಥಕವೊ ಸುಖತೀರ್ಥರ ಕರುಣಾ
ಪಾತ್ರನಾಗಿ ಬಲು 4
ಈ ತೆರದಿ ಸಂಪ್ರಾರ್ಥಿಪರಿಗಿಷ್ಟಾರ್ಥಗಳ ಕೊಡುವಾ
ಭೂತಲದಿ ಪ್ರಖ್ಯಾತ ಕಾರ್ಪರ ಕ್ಷೇತ್ರದಲಿ ಮೆರೆವ
ಪಾತಕ ಹರ ಶಿರಿನಾರಶಿಂಹನ ಕೃಪಾತಿಶಯದಿ ನಿ
ರ್ಭೀತನಾಗಿ ಬಲು 5
***