ಶ್ರೀ ಹನುಮಂತ ಭಟ್ಟ ಸಿದ್ಧಾಂತಿ ಕೃತ
( ಗುರುವರ ಇಂದಿರೇಶಾಂಕಿತ )
ತಿರುಪತಿ ಶ್ರೀ ಪಾಂಡುರಂಗಿ ಹುಚ್ಚಾಚಾರ್ಯರ ಸ್ತುತಿ ಪದ
( ಇಂದಿರೇಶರು )
ರುಕ್ಮಿಣೀ ಜನನೀಯಸ್ಯ ಶ್ರೀನಿವಾಸಸ್ತುಯತ್ಪಿತಾ।
ಯೋ ಪಾಂಡುರಂಗಿ ವಂಶೀಯಃ ತಂ ವಂದೇ ಸದ್ಗುರುಂ ಮಮ॥
ರಾಗಮಾಲಿಕೆ ಆದಿತಾಳ
ಖಮಾಚ್
ಕಂಡರೆ ನಮೋ ನಮೋ।ಶರಣರಶಿರಪದ
ಪೊರಿಯುವ ಚರಣಕೆ ನಮೋ ನಮೋ॥ಪ॥
ಅಂತಾಜಿ ಪಾಲಿತ ನಮೋ ನಮೋ।ಹರಿಮತ
ಕಾಂತಗೆ ಬೋಧಿತ ನಮೋ ನಮೋ
ಮಂದರಧರ ಶಿರಿಕೃಷ್ಣನ ನೋಡಿ ನಿ-
ರಂತರ ಹರುಷತ ನಮೋನಮೋ॥೧॥
ತಿಲ್ಲಂಗ್
ಶಂಕವ ಬಿಡಿಸಿದ ನಮೋನಮೋ।ಸ್ವಪನದಿ ಪ-
ತ್ರಾಂಕವ ತಿಳಿಸಿದ ನಮೋನಮೋ
ಡೊಂಕು ಹೃದಯದ ಭೀಮ ಸೂರಿಗೆ।ಗ್ರಂಥದ
ಬಿಂಕವ ತೋರಿದ ನಮೋನಮೋ॥೨॥
ಬಿಲಹರಿ
ಜೀವನದಾತಗೆ ನಮೋನಮೋ।ಸಂ-
ಜೀವ ಕಲತ್ರಗೆ ನಮೋನಮೋ
ಸೇವಿತ ನರಹರಿ ಪಾದ ಜಲದಲಿ।ಪರೆತನ
ಪಾವನ ಗೈದಗೆ ನಮೋನಮೋ॥೩॥
ಖರಹರಪ್ರಿಯ
ಗೀತೆಯ ಪಠಿಸಿದ ನಮೋನಮೋ।ಭಾಗ-
ವತವ ಪಠಿಸಿದ ನಮೋನಮೋ
ಸೀತಾವರನಿತ್ತ ತುಪ್ಪದಿ ಮಹಿಷಿಲಿ।ಮಂಗಳ
ಶಾತದಿ ಮಾಡಿದ ನಮೋನಮೋ॥೪॥
ಸುರುಟಿ
ಛಿಂದಿಸುಭಯವ ನಮೋನಮೋ। ಗುರುವರ
ಇಂದಿರೇಶ ಪ್ರೀಯ ನಮೋನಮೋ
ಇಂದುಕುಲಮಣಿ ಚರಣದಿ ಸುಸ್ಥಿರ।ನೀಡುವ
ಇಂದು ಸುಭಕುತಿ ನಮೋನಮೋ॥೫॥
***