Showing posts with label ಗಿರಿಶಾ ಗೌರೀಪ್ರಾಣಾಧೀಶ ಜಯ ಜಯದುರಿತ others. Show all posts
Showing posts with label ಗಿರಿಶಾ ಗೌರೀಪ್ರಾಣಾಧೀಶ ಜಯ ಜಯದುರಿತ others. Show all posts

Tuesday, 1 June 2021

ಗಿರಿಶಾ ಗೌರೀಪ್ರಾಣಾಧೀಶ ಜಯ ಜಯದುರಿತ ankita others

by hosakere chidambarayya


ಗಿರಿಶಾ ಗೌರೀಪ್ರಾಣಾಧೀಶ ಜಯ ಜಯದುರಿತ ನಾಶ ಮಹೇಶ ಪ


ದಕ್ಷಯಜ್ಞ 'ಧ್ವಂಸಕಾರಿ ಸುರಪಕ್ಷಪಾತಿ ಕಾಮಾರಿ ದುಃಖಹರ 1

ಘೋರಪಾಪ ಸಂದೋಹನಾಶನಭೂರಿ ದಯಾಳೋ ಭೋಗಿಭೂಷಣ 2

ಈಶಗಿರೀಶ ಧನೇಶ್ವರ 'ುತ್ರಕಾಶೀಶ್ವರ ಸುರಸನ್ನುತಿ ಪಾತ್ರ 3

ವಾಸವಾದಿನುತ ದುಷ್ಟಭಯಂಕರವೇಷ ಜಟಾಧರ ಚಂದ್ರಶೇಖರ 4

ಕಲಭಪ್ರೌಢ ಮಹಾನಾಟ್ಯೇಶ್ವರಆ'ಮುಕ್ತೇಶ್ವರ ಪ್ರಮಥ ಗಣೇಶ್ವರ 5

ಕಾಳಿಂದೀಪ್ರಿಯ ಕಮಲನಯನಸಖಕಾಲಕಾಲ ಕಾಲಾಗ್ನಿ ಪಂಚಮುಖ 6

ನೀಲಕಂಠ ನಿಖಿಲಾಮರ ರಕ್ಷಕಫಾಲಚಂದ್ರ ಸಂಸೃತಿ 'ಷಭಕ್ಷಕ 7

ಶಾಂತಮೂರ್ತಿವರಕಾಂತಿ ಗುಣಪ್ರಿಯಶಾಂತಿದಾಯಕಾ ಶಾಂತ ಸಂಶಯ 8

ಕುಂಭಜಾತ ನುತನಟನ'ಲಾಸಶಂಭು ಹರ ಚಿದಾಕಾಸ ನಿವಾಸ 9 

****