Showing posts with label ಹೊತ್ತು ವ್ಯರ್ಥಾ ಹೋಗುತಿದಕೋ ಮುತ್ತಿನಂಥಾ gurumahipati. Show all posts
Showing posts with label ಹೊತ್ತು ವ್ಯರ್ಥಾ ಹೋಗುತಿದಕೋ ಮುತ್ತಿನಂಥಾ gurumahipati. Show all posts

Wednesday, 1 September 2021

ಹೊತ್ತು ವ್ಯರ್ಥಾ ಹೋಗುತಿದಕೋ ಮುತ್ತಿನಂಥಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಹೊತ್ತು ವ್ಯರ್ಥಾ ಹೋಗುತಿದಕೋ ಮುತ್ತಿನಂಥಾ ಪ 


ಹೋಗುತಿದೆ ಮುತ್ತಿನಂಥಾ ದಿನದೊಳು | ಚಿತ್ತ ಸ್ವಸ್ಥ ಮಾಡಿ ಪುರುಷೋತ್ತಮನ್ನ ನೆನೆಯಿರೋ ಅ.ಪ ಉತ್ತುಮರ ಸಂಗಡದಲ್ಲಿ | ನಿತ್ಯ ಶ್ರವಣಮನನ ಮಾಡಿ | ಅತ್ತಲಿತ್ತಲಾಗದೆ | ಸು | ವೃತ್ತಿಯೊಳು ಬೆರಿಯಿರೋ 1 

ಪಗಡಿ ಪಂಚಿಯಾಡಿ ಪರರಾ | ಬಗಲಿ ಕಳೆದು ಕಳೆವದೇನು | ಯುಗುತಿ ಹೀನ ರಾಗದೆ | ಪಥ ಪಡಿಯಿರೋ 2 

ಮಂದ ಮತಿಯ ಕೊಂಡ್ಯಾಡಿ | ಮಂದ ಮತ್ತೆ ದೊರೆಯದಿದ್ದ | ಇಂದು ನಾಳೆಗೆನ್ನದೇ ಮು | ಕುಂದ ನಾಮವ ನೆನೆಯಿರೋ 3 

ಇಂದು ನರದೇಹದಿಂದ | ಬಂದು ಬರಡ ಮಾಡಬ್ಯಾಡಿ | ತಂದೆ ಮಹಿಪತಿ ದಯ | ದಿಂದ ಮುಕ್ತಿಯ ಪಡೆಯಿರೋ 4

***