Showing posts with label ನಾನೇನು ಬಲ್ಲೆ ನಿಮ್ಮ ನಾಮದ ಸ್ಮರಣೆಯನುಏನೆಂದು ಸ್ತುತಿ ಮಾಡಲರಿಯೆ neleyadikeshava. Show all posts
Showing posts with label ನಾನೇನು ಬಲ್ಲೆ ನಿಮ್ಮ ನಾಮದ ಸ್ಮರಣೆಯನುಏನೆಂದು ಸ್ತುತಿ ಮಾಡಲರಿಯೆ neleyadikeshava. Show all posts

Wednesday, 1 September 2021

ನಾನೇನು ಬಲ್ಲೆ ನಿಮ್ಮ ನಾಮದ ಸ್ಮರಣೆಯನುಏನೆಂದು ಸ್ತುತಿ ಮಾಡಲರಿಯೆ ankita neleyadikeshava

 ..

ನಾನೇನು ಬಲ್ಲೆ ನಿಮ್ಮ ನಾಮದ ಸ್ಮರಣೆಯನುಏನೆಂದು ಸ್ತುತಿ ಮಾಡಲರಿಯೆ ಪ


ಹರಿ ಮುಕುಂದನು ನೀನು ನರಜನ್ಮ ಹುಳು ನಾನುಪರಮಪುರುಷನು ನೀನು ಪಾಪಿ ನಾನುಗರುಡ ಗಮನನು ನೀನು ದುರುಳ ಕರ್ಮಿಯು ನಾನುಪರಂಜ್ಯೋತಿಯು ನೀನು ಪಾಮರನು ನಾನು 1


ಅಣುರೇಣು ತೃಣ ಕಾಷ್ಠ ಪರಿಪೂರ್ಣನು ನೀನುಕ್ಷಣಕ್ಷಣಕೆ ಅವಗುಣದ ಕರ್ಮಿ ನಾನುವನಜಸಂಭವನಯ್ಯ ವೈಕುಂಠಪತಿ ನೀನುತನುವು ಸ್ಥಿರವಲ್ಲದ ನರಬೊಂಬೆ ನಾನು 2


ಕಂಬದಲಿ ಬಂದಂಥ ಆನಂದಪತಿ ನೀನುನಂಬಿಗಿಲ್ಲದ ನಿರ್ಜೀವಿ ನಾನುಅಂಬರೀಷಗೆ ಒಲಿದ ದುರಿತ ದೂರನು ನೀನುಡಂಬಕದ ಮಾಯಾ ಶರೀರಿ ನಾನು 3


ವಾರಿಧಿಶಯನ ಭೂರಿ ಕಾರುಣ್ಯಪತಿ ನೀನುಘೋರತರ ಕಾಮಕ್ರೋಧಿಯು ನಾನುಈರೇಳು ಲೋಕವನು ಪೊಡೆಯಲಿಟ್ಟವ ನೀನುಸಾರಿ ಭಜಿಸದ ದುಷ್ಟ ಕರ್ಮಿ ನಾನು 4


ತಿರುಪತಿಯೊಳು ನೆಲಸಿದ ವೆಂಕಟೇಶನು ನೀನುಚರಣಕೆರಗುವ ಕನಕದಾಸನು ನಾನುಬಿರಿದುಳ್ಳ ದೊರೆ ನೀನು ಮೊರೆ ಹೊಕ್ಕೆನಯ್ಯ ನಾನುಮರಣ ಕಾಲಕೆ ಬಂದು ಕಾಯೊ ಹರಿಯೆ5

***