Showing posts with label ಬಾಳು ಬಾಳು ಹರಿ ಪೂಜಾಲೋಲುಪಳೊ ಬಾಳೊ hayavadana. Show all posts
Showing posts with label ಬಾಳು ಬಾಳು ಹರಿ ಪೂಜಾಲೋಲುಪಳೊ ಬಾಳೊ hayavadana. Show all posts

Wednesday, 1 September 2021

ಬಾಳು ಬಾಳು ಹರಿ ಪೂಜಾಲೋಲುಪಳೊ ಬಾಳೊ ankita hayavadana

 ..

ಬಾಳು ಬಾಳು ಹರಿ ಪೂಜಾಲೋಲುಪಳೊ ಬಾಳೊ ಮುನಿವಾದಿರಾಜಬಾಳೆಂದಕ್ಷತಿನಿಟ್ಟು ದೇವಕ್ಕಳೆಲ್ಲಬಲು ಕೃಪೆಯಲಿ ಹರಸಿದರೊ ಪ.


ಮಕ್ಕಳ ಮ್ಯಾಲೆಂದೆಂದು ಬಲುಅಕ್ಕರುಳ್ಳ ತಾಯಿ ಬಳಗಅಕ್ಷತಿನಿಕ್ಕಿ ಹರಸುವಂದದಿ ದೇ-ವಕ್ಕಳೆನ್ನ ಹರಸಿದರೊ 1


ಸಾಲಿಗ್ರಾಮ ತೀರ್ಥವನು ಮ್ಯಾಲೆಫಲವೀವ ಕ್ಷೇತ್ರವನುಕಾಲಕಾಲದಿ ಹರಿಸ್ಮರಣೆಯ ಬಿಡದಿರುಕೀಳು ಭವವೆಂಬ ಶತ್ರುವನು 2


ತುಲಸಿ ಪದ್ಮಾಕ್ಷಿಯ ಸರವ ನಿನ್ನಕೊರಳ ರವದಲ್ಲಿ ಮೆರೆವಅಲಸದೆ ಹರಿವಾಸರವನೆ ಬಿಡದಿರುಸುಲಭದಿ ಹರಿ ನಿನ್ನ ಪೊರೆವ 3


ಭ್ರಾಮಕರೊಡನಾಡದಿರು ಕಂಡಕಾಮಿನಿಯರ ಕೂಡದಿರುನೇಮನಿಷ್ಠೆಗಳನ್ನು ಬಿಡದಿರು ಎಂದೆಂದುತಾಮಸನಾಗಿ ಕೆಡದಿರು 4


ಹಯವದನಗೆ ನಮಿಸುತಿರು ನಿ-ರ್ಣಯದ ಶ್ರುತಿಯಸೇವಿಸುತಿರುಪ್ರಿಯ ಪುರಾಣಗಳ ಕೇಳುತಿರು ನಿ-ರ್ಭಯದಿಂದವನ ಪೊಗಳುತಿರು 5


ಹರಿಭಕುತರೊಳೆಂದೆಂದಾಡಿರೊ ನರ-ಹರಿಯ ನಾಮಗಳನು ಪಾಡಿರೊ ಹರಿ ಅರ್ಚನೆಯನು ಮಾಡಿರೊ ಶ್ರೀಹರಿಯ ಮೂರುತಿಯನು ನೋಡಿರೊ 6


ದೂರಕ್ಕೆ ದೂರನು ದಾವನ ಹ-ತ್ತಿರ ಬಂದ ಭಕುತರ ಕಾವನಆರಾಧಿಸಲು ಫಲವೀವನ ಹ-ತ್ತಿರ ಸೇರುವ ಭಾವ ದಾವನ 7


ಕಾಮದೇವನ ಪೆತ್ತ ಕರುಣಿಯ ಸುತ್ತಸೇವಿಪರಘತಮ ತರಣಿಯ- - - - - - - - - - -- - - - - - - - - - -8


ಜಯಿಸಿ ಕಂಸನೆಂಬ ಮಾವನ ಅ-sÀಯವಿತ್ತು ಭಕುತ ಸಂಜೀವನಹಯವದನನಾಗಿ ಪಾವನ ಶ್ರು-ತಿಯ ತಂದ ದೇವರದೇವನ9

***