..
ಬಾರೋ ಬಾರೋ ಶ್ರೀಗುರುರಾಯ
ಬಾರೋ ಬಾರೋ ಭೂಸುರವರ್ಯ
ಬಾರೋ ಬಾರೋ ಭಕ್ತಪ್ರೀಯ
ಭಾಸುರ ಕಾಯ ಪ
ಘೋರಾರಣ್ಯದೊಳು ಬಂದು ಸೇರಿದೆನೊ ದುಷ್ಕರ್ಮದಿ]
ಕ್ರೂರ ಮೃಗಗಳೆನ್ನತಿ ಬಾಧಿಸುತಿಹವು
ಚೋರರುಪದ್ರವವನ್ನು ನಾ ಸಹಿಸಲಾರೆ ಇಷ್ಟೆನುತ
ದೂರ ನೋಳ್ವರೆ ವ್ಯಾಳ್ಯಕೆ ಸೂರಿವರೇಣ್ಯ 1
ಮಂದಜನ ಸಂಗದಿಂದ ತಂದೆ ತ್ವತ್ಪಾದಾರ
ವಿಂದ ಪೊಂದದಿರೆ ಸಂಧಿಸಿಎನ್ನಗೆ ಬಂದÀ
ನಿಂದೆಗೈದ ದೋಷದಿಂದ ಬಂದ ಬನ್ನ ಪರಿಹಾರಕ್ಕೆ
ಹಿಂದೆ ನೀ ನಾಲ್ವರಿಯಲಿಲ್ಲೆ ಸಂದೇಹವ್ಯಾಕೆ 2
ಇಂದ್ರ ಸಮವಿರಾಜಿತ ಇಂದ್ರ ವಿರೋಧಿ ಸಂಭೂತ
ಇಂದ್ರ ದೇವಾಧಿ ಮಾನಿತ ಆನಂದ ಪ್ರದಾತ
ಇಂದ್ರ ಜಾರಿ ಸೂತ ಶಾಮಸುಂದರವಿಠಲ ದೂತ
ಇಂದ್ರ ಜಾತಾಖ್ಯರ ಪ್ರೀತ ಇಂದ್ರಾರ್ಯಪೋತ 3
***