Wednesday, 1 September 2021

ಬಾರೋ ಬಾರೋ ಶ್ರೀಗುರುರಾಯ ಬಾರೋ ಬಾರೋ ಭೂಸುರವರ್ಯ ankita shyamasundara

 ..

ಬಾರೋ ಬಾರೋ ಶ್ರೀಗುರುರಾಯ

ಬಾರೋ ಬಾರೋ ಭೂಸುರವರ್ಯ

ಬಾರೋ ಬಾರೋ ಭಕ್ತಪ್ರೀಯ

ಭಾಸುರ ಕಾಯ ಪ


ಘೋರಾರಣ್ಯದೊಳು ಬಂದು ಸೇರಿದೆನೊ ದುಷ್ಕರ್ಮದಿ]

ಕ್ರೂರ ಮೃಗಗಳೆನ್ನತಿ ಬಾಧಿಸುತಿಹವು

ಚೋರರುಪದ್ರವವನ್ನು ನಾ ಸಹಿಸಲಾರೆ ಇಷ್ಟೆನುತ

ದೂರ ನೋಳ್ವರೆ ವ್ಯಾಳ್ಯಕೆ ಸೂರಿವರೇಣ್ಯ 1


ಮಂದಜನ ಸಂಗದಿಂದ ತಂದೆ ತ್ವತ್ಪಾದಾರ

ವಿಂದ ಪೊಂದದಿರೆ ಸಂಧಿಸಿಎನ್ನಗೆ ಬಂದÀ

ನಿಂದೆಗೈದ ದೋಷದಿಂದ ಬಂದ ಬನ್ನ ಪರಿಹಾರಕ್ಕೆ

ಹಿಂದೆ ನೀ ನಾಲ್ವರಿಯಲಿಲ್ಲೆ ಸಂದೇಹವ್ಯಾಕೆ 2


ಇಂದ್ರ ಸಮವಿರಾಜಿತ ಇಂದ್ರ ವಿರೋಧಿ ಸಂಭೂತ

ಇಂದ್ರ ದೇವಾಧಿ ಮಾನಿತ ಆನಂದ ಪ್ರದಾತ

ಇಂದ್ರ ಜಾರಿ ಸೂತ ಶಾಮಸುಂದರವಿಠಲ ದೂತ

ಇಂದ್ರ ಜಾತಾಖ್ಯರ ಪ್ರೀತ ಇಂದ್ರಾರ್ಯಪೋತ 3

***


No comments:

Post a Comment