Showing posts with label ಬೃಂದಾವನದಿ ನೋಡುವ ಬಾರೆ ಗೋವಿಂದನಾಡುವ ಸಂದಣಿ ಸಾಲದೆ ಸಖಿ shree krishna. Show all posts
Showing posts with label ಬೃಂದಾವನದಿ ನೋಡುವ ಬಾರೆ ಗೋವಿಂದನಾಡುವ ಸಂದಣಿ ಸಾಲದೆ ಸಖಿ shree krishna. Show all posts

Wednesday, 1 September 2021

ಬೃಂದಾವನದಿ ನೋಡುವ ಬಾರೆ ಗೋವಿಂದನಾಡುವ ಸಂದಣಿ ಸಾಲದೆ ಸಖಿ ankita shree krishna

 ..

ಬೃಂದಾವನದಿ ನೋಡುವ ಬಾರೆ ಗೋ-ಪ


ವಿಂದನಾಡುವ ಸಂದಣಿ ಸಾಲದೆ ಸಖಿ ಅ.ಪ.


ಮುನಿಗಳು ತರು ಪಕ್ಷಿ ಮೃಗಂಗಳಾಗಿರೆಸನಕಾದಿಗಳು ಗೋವುಗಳಾಗಿರೆಅನಿಮಿಷರೆಲ್ಲರು ಗೋಪಾಲರಾಗಿರೆದನುಜಾಂತಕನು ಮನುಜನಂತಾಗಿರೆ 1


ತಳಿತ ತೋರಣದಿಂ ತಂಪಿನ ನೆಳಲಿಂಮಳೆಯಾಗಿ ಸುರಿವಾ ಮಕರಂದ ಜಲದಿಂಫಲ ಪುಂಜಗಳಿಂ ಶುಕಚಾಟುಗಳಿಂನಳಿನನಾಭನನುಪಚರಿಪ ವೃಕ್ಷಗಳುಳ್ಳ 2


ತಳಿತ ತರುಗಳೆಲ್ಲ ತಂತಮ್ಮ ಜಾತಿಯಉಲುಹನುಳಿದು ಕಣ್ಣುಮುಚ್ಚಿ ತೆರೆಯುತ್ತನಳಿನನಾಭನ ವೇಣುಗೀತೆಯ ರಸದಲ್ಲಿಮುಳುಗಿ ಮುನಿಗಳಂತಿಪ್ಪ ಪÀಕ್ಷಿಗಳುಳ್ಳ 3


ಚಿತ್ತಜನೈಯನ ವೇಣುನಾದವಎತ್ತಿದ ಕಿವಿಯಿಂದ ಸವಿಯುತಲಿಮತ್ತಾದ ಸುಖಜಲ ಕಡಲಾಗಿ ಹರಿಯಲುಚಿತ್ತರದಂತಿಪ್ಪ ತುರುವಿಂಡುಗಳುಳ್ಳ 4


ರಂಗನ ಪದ ನಖ ತಿಂಗಳ ಬೆಳಕಿಗೆತುಂಗ ಚಂದ್ರಕಾಂತ ಶಿಲೆ ಒಸರಿಹಿಂಗದೆ ಹರಿದು ಕಾಳಿಂದಿಯ ಕೂಡಲುಗಂಗೆ ಯಮುನೆಯರ ಸಂಗಮದಂತಿಪ್ಪ 5


ಸಿರಿಯರಸನ ನಗೆಮೊಗವೆಂಬ ಚಂದ್ರನುವರಕೌಸ್ತುಭವೆಂಬ ಬಾಲರವಿಯುಎರಡನು ಕಂಡು ಚಕೋರ ಚಕ್ರವಾಕಇರುಳು ಹಗಲು ಎಂದು ಹೋಗುತಲಿರುತಿಪ್ಪ6


ಹರಿಯ ಕೊಳಲ ಸ್ವರದತಿ ಮೋಹನಕೆತರುಮೊಗ್ಗೆಗಳಿಂ ಪುಳುಕಿತವಾಗೆಗಿರಿಯು ಝರಿಯಾ ನೆವದಿಂ ಕರಗಲುತೊರೆಯು ಸುಳಿಯ ನೆವದಿಂದ ತಾ ನಿಲ್ಲುವ7


ಅಳಿಗಳು ಗಾನದಿಂದುಲಿದುಲಿದಾಡುತ್ತ ಹಲವು ವರ್ಣದ ವನದೇವತೆಗಳೆಲ್ಲಚಲುವ ಕುಂಡಲ ತಾಳಮೇಳದ ರಭಸಕ್ಕೆನಲಿನಲಿದಾಡುವ ನವಿಲ ಹಿಂಡುಗಳುಳ್ಳ 8


ನಳನಳಿಸುವ ವನಮಾಲೆ ಇಂದ್ರಚಾಪಪೊಳೆವ ಪೊಂಬಟ್ಟೆ ಮಿಂಚು ವೇಣುಗಾನಎಳೆಯ ಗರ್ಜನೆ ಶ್ಯಾಮಮೇಘ ಕೃಷ್ಣಮಳೆಯ ಮೇಘವೆಂದು ಚಾತಕ ನಲಿಯುತ9

***