Showing posts with label ಗೋಪಾಲ ಶ್ರೀಕೃಷ್ಣ ಮೂರುತಿ ನೀನೇ govinda. Show all posts
Showing posts with label ಗೋಪಾಲ ಶ್ರೀಕೃಷ್ಣ ಮೂರುತಿ ನೀನೇ govinda. Show all posts

Monday, 11 November 2019

ಗೋಪಾಲ ಶ್ರೀಕೃಷ್ಣ ಮೂರುತಿ ನೀನೇ ankita govinda

by ಗೋವಿಂದದಾಸ
ಗೋಪಾಲ ಶ್ರೀಕೃಷ್ಣ ಮೂರುತಿ ನೀನೇಕಾಪಾಡೆನ್ನನುಜಿಷ್ಣುಸಾರಥಿ ಪ

ತಾಪತ್ರಯದೊಳ್ ನೊಂದೆ ತಪಗೈಯ್ಯಲರಿಯೆನು ನೀಕೃಪೆಯೊಳನುದಿನರೂಪತೋರಿಸು ದೇವಾ ಅ.ಪ

ದೇವಕಿಯುದರದಿ ಜನಿಸಿಗೋಪಿದೇವಿಗೆ ತನಯನೆಂದೆನಿಸಿಜೀವ ಘಾತಕೆ ಬಂದ ಪೂತನಿಯಸು ಹೀರಿಗೋವುಗಳನು ಮೇಸಿದೆ 1

ದೈತ್ಯರ ಕೊಂದು ಗೋವರ್ಧನವೆತ್ತಿದೇಕಾಮದಿ ಬಂದ ಬಾಲಕಿಯರನು ಕೂಡಿದೇಹಾವಿನ ಹೆಡೆಯ ಮೇಲೆ ನಲಿದು ಬಿಲ್ ಹಬ್ಬದಿಮಾವ ಕಂಸನ ಮುರಿದು ಕರುಣದಿತಾಯಿ ತಂದೆಯ ಸೆರೆಯ ಬಿಡಿಸಿದೆ 2

ಶರಧಿಮಧ್ಯದಿ ಮನೆಮಾಡಿದೇಅಲ್ಲಿಭರದಿಂದಷ್ಟಮ ಸ್ತ್ರೀಯರಲಿ ಕೂಡಿದೇನರಮುರಶಾದ್ಯರ ಮುರಿದು ಷೋಡಶ ಸಹಸ್ರತರುಣಿಯರೊಡಗೂಡಿದೇ ಪಾರಿಜಾತತರುವ ನೀನೊಲಿದು ತಂದೆ ಪಾಂಡವರೊಳುಭರಿತ ಕೃಪೆಯ ತೋರಿದೆಧುರದಿಮಾಗಧಚೈದ್ಯ ಧರಣಿಪಾಲರ ಗೆಲ್ದುತರುಣಿ ದ್ರೌಪದಿಗ್ವರವ ಪಾಲಿಸಿನರಗೆ ಸಾರಥಿಯಾದೆ ಶ್ರೀಹರೀ 3

ಸಂಧಾನವೆಸಗಿ ಪಾಂಡವರಕರ-ದಿಂದ ಕೊಲ್ಲಿಸಿದೆ ಕೌರವರಚಂದ ಧರ್ಮರಾಯಗೆ ಪಟ್ಟ ಕಟ್ಟಿಸೀನಿಂದಶ್ವಮೇಧಗೈಸಿ ನೀ ಸುರಗಣವೃಂದ ಸಂತಸ ಬಡಿಸಿ ಯಾದವಕುಲ ಮುಗಿಲದಿಂದಲಿಸುಂದರಾಂಗವ ಬಿಟ್ಟು ಕ್ಷೀರಸಿಂಧುವಿಗೈದೆಚಂದದಲಿ ಗೋವಿಂದದಾಸನೆಬಂದು ಮಂಗಲ ಮುಖವ ತೋರಿಸೋ 4
*******