Showing posts with label ಅಹುದೋ ಹನುಮಂತ ನೀನಹುದೊ ಬಲವಂತ hayavadana AHUDO HANUMANTA NEENAHUDO BALAVANTA. Show all posts
Showing posts with label ಅಹುದೋ ಹನುಮಂತ ನೀನಹುದೊ ಬಲವಂತ hayavadana AHUDO HANUMANTA NEENAHUDO BALAVANTA. Show all posts

Tuesday, 7 December 2021

ಅಹುದೋ ಹನುಮಂತ ನೀನಹುದೊ ಬಲವಂತ ankita hayavadana AHUDO HANUMANTA NEENAHUDO BALAVANTA



ಅಹುದೋ ಹನುಮಂತ ನೀನಹುದೊ ಬಲವಂತ
ನೀನಹುದೋ ಮುಖ್ಯಪ್ರಾಣ ಮೂಲಗುರು ಅಹುದೊ ||ಪ||

ಅಹುದೊ ಧರಣಿಯ ಮ್ಯಾಲೆ ದಿವಾಕರನ ಪ್ರಭೆಯಂತೆ
ಅಹುದೊ ಮಧ್ವಮತಕೆ ಬಿರುದು ನೀ ಅಹುದೊ ||ಅ.ಪ||

ಅಂಜನೆಯ ಗರ್ಭದಲಿ ಉದ್ಭವಿಸಿದ್ಯೊ ನೀನು
ಸಂಜೀವನವ ತಂದ್ಯೊ ಸಕಲ ಕಪಿಗಳಿಗೆ
ಮಂಜುಭಾಷಣ ನೀನು ಶರಧಿಯನು ದಾಟಿದೆಯೊ
ಕಂಜಾಕ್ಷಿ ಸೀತೆಗೆ ಉಂಗುರವನಿತ್ತೆ ||೧||

ಕುಂತಿಯ ಗರ್ಭದಲಿ ಉದ್ಭವಿಸಿದ್ಯೊ ನೀನು
ಪಂಥವನಾಡಿ ದಾಯಾದಿಯರೊಡನೆ
ಕಂತುಪಿತನ ಕೂಡಿ ಕೌರವರನ ಗೆಲಿದ್ಯೊ
ಸಂತೋಷದಿಂದ ಸಾಮ್ರಾಜ್ಯ ಕೈಗೊಂಡೆ ||೨||

ಮಧ್ವಾವತಾರದಲಿ ಮುನಿವೇಷವನು ತಾಳಿ
ಅದ್ವೈತವೆಂಬೊ ಅರಣ್ಯವನು ತರಿದೆ
ಮಧ್ವಶಾಸ್ತ್ರವೆಂಬೊ ಮತವ ನಿರ್ಣೈಸಿದೆ
ಮುದ್ದು ಹಯವದನದಾಸ ನೀನಹುದೊ ||೩||
****

ಅಹುದೊ ಹನುಮಂತ ನೀನಹುದೊ ಬಲವಂತ ನೀ-ನಹುದೋ ಮುಖ್ಯಪ್ರಾಣ ಮೂಲಗುರು ಅಹುದೊ ಪ.


ಅಹುದೊ ಧರಣಿಯ ಮ್ಯಾಲೆ ದಿವಾಕರನ ಪ್ರಭೆಯಂತೆಅಹುದೊ ಮಧ್ವಮತಕೆ ಬಿರುದು ನೀ ಅಹುದೊ ಅ.ಪ.


ಅಂಜನೆಯ ಗರ್ಭದಲಿ ಉದ್ಭವಿಸಿದ್ಯೊ ನೀನುಸಂಜೀವನವ ತಂದ್ಯೊ ಸಕಲ ಕಪಿಗಳಿಗೆಮಂಜುಭಾಷಣ ನೀನು ಶರಧಿಯನು ದಾಟಿದೆಯೊಕಂಜಾಕ್ಷಿ ಸೀತೆಗೆ ಉಂಗುರವನಿತ್ತೆ 1


ಕುಂತಿಯ ಗರ್ಭದಲಿ ಉದ್ಭವಿಸಿದ್ಯೊ ನೀನುಪಂಥವನಾಡಿ ದಾಯಾದ್ಯರೊಡನೆಕಂತುಪಿತನ ಕೂಡಿ ಕೌರವರ ಗೆಲಿದ್ಯೊಸಂತೋಷದಿಂದ ಸಾಮ್ರಾಜ್ಯ ಕೈಗೊಂಡೆ 2


ಮಧ್ವಾವತಾರದಲಿ ಮುನಿವೇಷವನು ತಾಳಿಅದ್ವೈತವೆಂಬೊ ಅರಣ್ಯವನು ತರಿದೆಮಧ್ವಶಾಸ್ತ್ರವೆಂಬೊ ಮತವ ನಿರ್ಣೈಸಿದೆಮುದ್ದು ಹಯವದನದಾಸ ನೀನಹುದೊ 3

***