RAO COLLECTIONS SONGS refer remember refresh render DEVARANAMA
ಹರಿ ಶ್ರೀ ರಘುರಾಯಾ ಸಂಸಾರ ಮಾಯಾ
ಬಿಡಿಸೋ ಭವ ಜೀಯಾ ತೋರೊ ನಿನ್ನಯ ದಿವ್ಯ ಕಾಯಾ
ಕೊಡು ನೀ ಸುಮತಿಯಾ ಪ
ಗರುಡವಾಹನಾ ಪರಮಪಾವನಾ
ಶಿರಿಯ ಸುಖದಿ ಮರೆಯಬ್ಯಾಡೊ ಚರಣದಾಸನಾ 1
ಇಷ್ಟದಾಯಕಾ ಕಷ್ಟತಾರಕಾ
ಸೃಷ್ಟಿ ಪತಿಯೆ ಕೊಟ್ಟು ಸಲಹೊ ಮೋಕ್ಷದಾಯಕಾ2
ನಾಶರಹಿತನೇ ವಾಸುದೇವನೇ
ಪೋಷಿಸೊ ತವ ದಾಸನಾ ಹನುಮೇಶ ವಿಠಲನೇ3
****