Showing posts with label ನಿನ್ನ ಮಗನ ಲೂಟಿ ಘನವಮ್ಮಕರೆದು ಚಿಣ್ಣಗೆ purandara vittala NINNA MAGANA LOOTI GHANAVAMMA KAREDU CHINNAGE. Show all posts
Showing posts with label ನಿನ್ನ ಮಗನ ಲೂಟಿ ಘನವಮ್ಮಕರೆದು ಚಿಣ್ಣಗೆ purandara vittala NINNA MAGANA LOOTI GHANAVAMMA KAREDU CHINNAGE. Show all posts

Wednesday, 8 December 2021

ನಿನ್ನ ಮಗನ ಲೂಟಿ ಘನವಮ್ಮಕರೆದು ಚಿಣ್ಣಗೆ purandara vittala NINNA MAGANA LOOTI GHANAVAMMA KAREDU CHINNAGE

ಪುರಂದರದಾಸರು
ನಿನ್ನ ಮಗನ ಲೂಟಿ ಘನವಮ್ಮ-ಕರೆದು |
ಚಿಣ್ಣಗೆ ಬುದ್ಧಿಯ ಹೇಳೇ ಗೋಪಮ್ಮ ಪ

ಶಿಶುಗಳ ಕೈಲಿದ್ದ ಬೆಣ್ಣೆಗೆ ಉಳಿವಿಲ್ಲ |ಪಸು-ಕರುಗಳಿಗೆ ಮೀಸಲುಗಳಿಲ್ಲ ||ಮೊಸರ ಮಡಕೆಯಲಿಮಾರಿಹೊಕ್ಕಂತಾಯ್ತು |ಶಶಿಮುಖಿಯರು ಗೋಳಿಡುತಿಹರಮ್ಮ1

ಮರೆತು ಮಲಗಿದ್ದವರ ಮೊಲೆಗಳ ತಾನುಂಬ |ಕಿರಿಯ ಮಕ್ಕಳಿಗೆ ಮೊಲೆಹಾಲಿಲ್ಲವೊ ||ಹೊರಗೆ ಲೂಟಿ ಒಳಗೆ ಈ ಲೂಟಿ-ಎ-|ಚ್ಚರದ ಬಟ್ಟೆಯ ಕಾಣೆವಮ್ಮ ಗೋಪಮ್ಮ 2

ಊರೊಳಗಿರಲೀಸ ಊರ ಬಿಟ್ಟು ಹೋಗಲೀಸ |ಈರೇಳು ಭುವನಕೆ ಒಡೆಯನಂತೆ ||ವಾರಿಜನಾಭಶ್ರೀ ಪುರಂದರವಿಠಲನ |ಕೇರಿಯ ಬಸವನ ಮಾಡಿ ಬಿಟ್ಟೆಯಮ್ಮ 3
****