Showing posts with label ರಕ್ಷಿಸುವದುಯೆನ್ನ abhinava pranesha vittala ankita suladi ಪ್ರಾರ್ಥನಾ ಸುಳಾದಿ RAKSHISUVUDAYENNA PRARTHANA SULADI. Show all posts
Showing posts with label ರಕ್ಷಿಸುವದುಯೆನ್ನ abhinava pranesha vittala ankita suladi ಪ್ರಾರ್ಥನಾ ಸುಳಾದಿ RAKSHISUVUDAYENNA PRARTHANA SULADI. Show all posts

Sunday, 13 December 2020

ರಕ್ಷಿಸುವದುಯೆನ್ನ abhinava pranesha vittala ankita suladi ಪ್ರಾರ್ಥನಾ ಸುಳಾದಿ RAKSHISUVUDAYENNA PRARTHANA SULADI

 Audio by Vidwan Sumukh Moudgalya

ಶ್ರೀ ಅಭಿನವ ಪ್ರಾಣೇಶದಾಸಾರ್ಯ ವಿರಚಿತ  ಪ್ರಾರ್ಥನಾ ಸುಳಾದಿ 


 ರಾಗ : ಕಾಪಿ


 ಧೃವತಾಳ


ರಕ್ಷಿಸುವದುಯೆನ್ನನೀಕ್ಷಿಸಿ ಕರುಣದಿ

ಪಕ್ಷಿವಾಹನ ಕಮಲಾಕ್ಷದೇವ

ತ್ಯಕ್ಷಫಣಿಪವಿಸಹಸ್ರಾಕ್ಷ ಸುರವಂದ್ಯ

ರಾಕ್ಷಸರಾತಿ ಜಗದ್ರಕ್ಷನೆ

ಅಕ್ಷರಪ್ರತಿಪಾದ್ಯಮೋಕ್ಷದಾಯಕಸುರ

ಕಕ್ಷಸನ್ನುತ ಭಕ್ತಾಪೇಕ್ಷದಾತಾ

ಚಕ್ಷುಶ್ರವಾಚಲವಾಸ ಶ್ರೀವೆಂಕಟೇಶ

ಲಕ್ಷ್ಮೀಶ ಅಭಿನವ ಪ್ರಾಣೇಶ ವಿಠಲ ॥೧॥


 ಮಟ್ಟತಾಳ


ವೃದ್ಧನಾದೆ ದೇಹಜರ್ಜರವಾಗಿಹುದು

ಬದ್ಧವು ದ್ವಿಜಪಂಕ್ತಿ ಹೊದ್ದಿರುವುದು ಜೋಲಿ

ಎದ್ದುಪೋದರಯ್ಯ ದಿಗ್ ದೇವತೆಗಳು 

ಎದ್ದು ನಿಲ್ಲಲಾರೆ ಬಿದ್ದೆನು ನಿನ್ನಡಿಗೆ 

 ಮಧ್ವಪತ್ಯಭಿನವ ಪ್ರಾಣೇಶ ವಿಠಲಯ್ಯ 

ಮಧ್ವಮತರತಿ ಇತ್ತು ಉದ್ಧರಿಸು ಜೀಯ ॥೨॥


 ತ್ರಿವಿಡಿತಾಳ


ಧುರದೊಳುರವಿಜನ ಉರಗಬಾಣಕೆಸಿಕ್ಕ

ನರನಪೊರೆದೆ ರಥಧರಿಗೆಮೆಟ್ಟಿ

ತರಣಿಗಭಯವನಿತ್ತು ರಕ್ಷಿಸಿದಿಯಾ

ಹರಿರಾಜನ ವಿಷ್ಟರ ಕರುಣಿಸುತ

ಧರಿದೇವಸಾಂದೀಪ ಗುರುವಿಗೆ ಕರುಣದಿ

ತರಳನ ತಂದಿತ್ತೆ ಸರ್ವೇಶನೆ

ಖರದಶಕಂಠನನುಜವಿಭೀಷಣರ

ಶರಣರ ಸಲಹಿದ ಕರುಣಾರ್ಣವ

ಕೆರಳಿ ಮುದ್ಗರದಿಂದಿವರ ಶೃತಾಯುಧ ನಿನ್ನ

ಶಿರಕೆ ಹೊಯ್ಯಲು ಗದೆ ತಿರುಗಿಯವನ

ಶರವ ಕುಟ್ಟಿ ಸಂಹರಿಸಿದ ಚರಿಯವು

ಪರಮ ಭಾಗವತ ಪರುಟಿಶಯ್ಯನ ಸುತ

ತರಳ ಪ್ರಹ್ಲಾದನ ಪೊರೆದ ದೇವ

ವರವೃದ್ಧ ವಿಪ್ರಗೆ ಭರಿತಜವ್ವನವಿತ್ತ

ಕರಿರಕಾರಗೆ ಒಲಿದು ಶರಣುಬಂಧು ಕರಿ-

ಬಲಿ ಧೃವ ಮುಖ್ಯ ಶರಣರ ಪರಿಪ‍ಾಲ

ಕರುಣಾಳು ಅಭಿನವ ಪ್ರಾಣೇಶ ವಿಠಲ ॥೩॥


 ಅಟ್ಟತಾಳ


ಭ್ರಷ್ಟನಾದೆನು ನಾನು ಮಾಯಾದೊಳಗೆ ಬಿದ್ದು

ಕಷ್ಟ ಬಡುವೆ ಭವಘೋರಾರಣ್ಯದಿ

ಅಷ್ಟ ಸಲಗಗಳು ಷಷ್ಠ ವಾಲ್ಯಗಳು

ದುಷ್ಟ ಭೂತಗಳು ಮೂರು ಹೆಮ್ಮಾರಿಗಳು

ಬಿಟ್ಟು ಬೆನ್ನಟ್ಟಿ ಭಾದಿಸುತಿವೆ 

ಬಟ್ಟೆಗಾಣದೆ ಬಹು ತೊಳಲುತ್ತಿರುವೆನಯ್ಯ

ಜಿಷ್ಣು ಸಾರಥಿ ಪರಮೇಷ್ಟಿ ಜನಕಯೆನ್ನ

ಕಷ್ಟವ ಬಿಡಿಸಯ್ಯ ಸುಪಥವ ತೋರಯ್ಯಾ

 ಶ್ರೇಷ್ಠಾಭಿನವ ಪ್ರಾಣೇಶ ವಿಠಲರಾಯ ॥೪॥


 ಆದಿತಾಳ


ಏಸೇಸು ಕಾಲದಿ ಈಶ ಎನಗೆ ನೀನು

ಆಸಾಸು ಕಾಲದಿ ದಾಸ ನಿನಗೆ ನಾನು

ವಾಸುದೇವ ಹೃಷೀಕೇಶ ದಯಾನಿಧೆ

ವಾಸುಕಿತಲ್ಪನೆ ವೀಶರಥನೆ ಜಗ-

ದೀಶಕೀಶಪತಿ ದಾಶರಥಿಯೇ ನಿನ್ನ

ದಾಸರಾದ ಪ್ರಾಣೇಶರಣುಗನಿಹೆ

ದೋಷಾಮಯಗಳ ಕ್ಷಮಿಸು ರಕ್ಷಿಸು ದೇವ

ಭೂಸುರ ಜನುಮಾ ಭಾಸಗೊಳಿಸದಲೆ

ಪೋಷಿಸುವುದು ತವ ದಾಸನೆಂದೆನಿಸುತ 

ವಾಸವನು ತಪಭೇಷಭಾಸ ಕರು-

ಣಾಸಮುದ್ರ ಕಾಳೀಶಹೃನ್ಮಂದಿರ

 ಮೇಶಾಭಿನವ ಪ್ರಾಣೇಶವಿಠಲ ಪಾಹಿ ॥೫॥


 ಜತೆ


ಇನ್ನಾದರು ದಯ ತೋರಿ ರಕ್ಷಿಪುದಯ್ಯಾ

 ಮಾನ್ಯಾಭಿನವ ಪ್ರಾಣೇಶವಿಠಲರಾಯ ॥೬॥

*****