Showing posts with label ನರಹರಿ ರೂಪದಲ್ಲಿ ವಾಸವಾಗಿ ಇಲ್ಲಿ gopala vittala. Show all posts
Showing posts with label ನರಹರಿ ರೂಪದಲ್ಲಿ ವಾಸವಾಗಿ ಇಲ್ಲಿ gopala vittala. Show all posts

Thursday, 12 December 2019

ನರಹರಿ ರೂಪದಲ್ಲಿ ವಾಸವಾಗಿ ಇಲ್ಲಿ ankita gopala vittala

ನರಹರಿ ರೂಪದಲ್ಲಿ ವಾಸವಾಗಿ ಇಲ್ಲಿ |
ದುರಿತ ದುಷ್ಕೃತ ಬ್ರಹ್ಮೇತಿಗಳೋಡಿಸುವ |
ಸಿರಿ ರಾಮನಾಗಿ ಇಲ್ಲಿ ಪರಿ ಪರಿ ಪರಿ ದೇಶಾಂ-|
ತರ ಅನ್ನ ಕಳಕೊಂಡು ನರರಿಲ್ಲಿ ಬಂದರೆ |
ಸ್ಥಿರ ಪಟ್ಟ ಕಟ್ಟುವ ಸಿರಿ ಕೃಷ್ಣನಾಗಿಲ್ಲಿ |
ಪರಿ ಪರಿಯಲಿ ಬಂದ ಪರಮಾತುರರಿಗೆ |
ವರವೀವ ಪುತ್ರೋತ್ಸವ ಮುಂಜಿ ಮದುವೆಯ |
ಹರಕೆಗಳ ಕೈಕೊಂಡು ಹರುಷ ಬಡಿಸುವವರ |
ಸಿರಿ ವೇದವ್ಯಾಸನಿಲ್ಲಿ ಭರದಿಂದಲಿ ಬಂದ |
ದುರುವಾದಿಗಳನೆಲ್ಲ ಧುರದಿಂದಲೋಡಿಸಿ |
ಮುರಿದು ಅವರ ಶಾಸ್ತ್ರ , ಹರಿ ಸರ್ವೋತ್ತಮನೆಂದು |
ಇರುವನಿಲ್ಲಿ ತೋರಿ ಶರಣ ಜನಕ ಇನ್ನು |
ವರ ಜ್ಞಾನ ಸುಧೆಯನ್ನು ಕರೆದು ಕೊಡುತಲಿಪ್ಪ |
ಸಿರಿ ವಂದಿತ ಪಾದ ಗೋಪಾಲ ವಿಠ್ಠಲ |
ಪರಿ ಪರಿಯಲಿ ಇಲ್ಲಿ ವಾಲಗ ಕೈಕೊಂಬ || ೩ ||
***********