Showing posts with label ಶ್ರೀಮಹಾಲಕ್ಷಮಿತಾಯೇ ಶ್ರೀ ಮಹಾಮಾಯೆ others. Show all posts
Showing posts with label ಶ್ರೀಮಹಾಲಕ್ಷಮಿತಾಯೇ ಶ್ರೀ ಮಹಾಮಾಯೆ others. Show all posts

Wednesday, 22 September 2021

ಶ್ರೀಮಹಾಲಕ್ಷಮಿತಾಯೇ ಶ್ರೀ ಮಹಾಮಾಯೆ ankita others

ಶ್ರೀಮಹಾಲಕ್ಷಮಿತಾಯೇ | ಶ್ರೀ ಮಹಾಮಾಯೆ |

ಹೇಮಾಯಾ ಕರುಣಾಬ್ದಿಯೇ | ಕಾಮಿತ ಫಲನೀಯೇ |

ಸಾಮಜಗಮನಿಯೇ | ಹೇಮಾಯಾ ಕೋಟಿ ಸಮಕಾಯೇ |

ಶುಭಚರಿಯ | ಬಹುಪರಿಯೇ | ಹರಿಪ್ರೀಯೇ | ಅರಿಯೇ ಪ


ಶರಧಿಸುತವನೇ | ಸರಸಿಜಸದನೆ |

ಸುರಚಿರದವರಾನೆ | ಕರಿಸರ್ಪವೇಣೆ |

ದುರಿತಾದೌಘಪಹರಣೆ | ಕರುಣದಾಗಾರೆ ಶರಣೆ |

ನೆರೆನಿನ್ನನಂಬಿದೆನೆ ಮಾತೆ | ಅದ್ಭುತೆ |

ರವಿನಮಿತೆ | ಪ್ರಖ್ಯಾತೆ | ದಾತೆ 1


ಹೊಳೆವ ಸೌಂದರ್ಯ ಸಲಹೆ | ಸಲೆಕುಲದೈವೆ |

ಚಲುವ ಸುಜನ ಸೇವೆ | ಮಲಿನರ ಭಾವೆ |

ಹಲವು ಮಾತೇನು ಫಲವೇ | ಬಲುನಾಹಂಬಲಿಸುವೆ |

ಒಲಿದು ಕರುಣಿಸು ಭಾಗ್ಯವಂತೆ | ಗುಣವಂತೆ |

ಬಹುಶಾಂತೆ | ದಯವಂತೆ ಕಾಂತೆ 2


ಕರವೀರ ಪುರಧೀಶೆ | ಶರಣರುಲ್ಹಾಸೆ |

ಸುರಮುನಿಜನತೋಷೆ | ಶಿರಸ್ವಪ್ರಕಾಶೆ |

ಪರತರ ಸುವಿಲಾಸೆ | ಗುರುಕೃಷ್ಣಸುತನೀಶೆ |

ವರಕೊಲ್ಹಾಸುರನ ವಿನಾಸ | ಜಗದೀಶೆ | ಮೃದುಭಾಷೆ |

ಅವಿನಾಶೆ | ಈಶೆ 3

***