..
kruti by pradyumna teertha ಪ್ರದ್ಯುಮ್ನತೀರ್ಥರು
ಹೀಂಗಾಯಿತ್ಹೀಂಗಾಯಿತೆ ಎನ್ನಯ ಬಾಳು ಪ
ಗಂಗಾಜನಕ ಪಾಂಡುರಂಗ ಮೂರುತಿಯನು
ಹಿಂಗದೆ ಭಜಿಸದೆ ಅಂಗಜನ್ವಶನಾದೆ 1
ಕಂತು ಜನಕ ಲಕ್ಷ್ಮೀಕಾಂತ ಮೂರುತಿಯನ್ನು
ಚಿಂತಿಸದೆ ವಿಷಯ ಚಿಂತನೆಯಲ್ಲಿರುವೆ 2
ಡಂಭಕತನದಿ ಬಲು ಹಿಂಡು ಜನರ ಮುಂದೆ
ಸಂಭಾವಿತನಂದದಿ ಶುಂಭ ನಾ ಮೆರೆದೆನೊ 3
ಅಂಗನೆಯರ ಅಂಗಸಂಗ ಬಯಸಿ ಅಂತ
ರಂಗದಿ ಕುಳಿತು ಬಹು ಸಂಗತಿ ಕಲ್ಪಿಸಿದೆ 4
ನಾನು ಪೇಳುವುದೇ ಸನ್ಮಾನ್ಯವೆಂದುಸುರಿ ನಾ
ಮಾನಿನಿಯರ ಕೂಡಿ ಶ್ವಾನನಂದದಿ ಬಾಳ್ವೆ 5
ಬಿಡಿಸೋ ಬಿಡಿಸೋ ಹರಿ ಕೇಡು ಬುದ್ಧಿಗಳನ್ನು
ಈಡು ನಿನಗಿಲ್ಲೆಂಬೊ ದೃಢಮನಸನೆ ಕೊಡೊ 6
ಘನತೆ ನಿನಗಲ್ಲವೊ ದೀನರ ಬಳಲಿಪುದು
ಮಾನದಿಂದಲಿ ಕಾಯೊ ಶ್ರೀ ನರಹರಿಯೇ7
***