Showing posts with label ಳಳ- RSS- ನಮಿಸಿ ಭಾರತಮಾತೆಗೆ others rss. Show all posts
Showing posts with label ಳಳ- RSS- ನಮಿಸಿ ಭಾರತಮಾತೆಗೆ others rss. Show all posts

Friday, 24 December 2021

ನಮಿಸಿ ಭಾರತಮಾತೆಗೆ others rss

   

RSS song .

ನಮಿಸಿ ಭಾರತಮಾತೆಗೆ ಧುಮುಕಿ ಕಾರ್ಯಕ್ಷೇತ್ರಕೆ

ತ್ಯಜಿಸಿ ಭೀತಿ ಅಂಜಿಕೆ ಚಲಿಸಿ ಮುಂದೆ ಮುಂದಕೆ

ಜೈ ಭಾರತಿ, ಜೈ ಭಾರತಿ, ಜೈ ಭಾರತಿ ನಮೋ ಜಗದ ಸಾರಥಿ ||ಪ||


ಶೂರವೀರಧೀರರು ಸಾಧುಸಂತಯತಿಗಳು

ತೋರಿದಂಥ ದಾರಿಯು ಸಾರಿಧಂಥ ನೀತಿಯು

ನಮಗೆ ಮಾರ್ಗದರ್ಶಕ ಸತತಸ್ಫೂರ್ತಿದಾಯಕ ||೧||


ಬರಲಿ ವಿಘ್ನ ಸಾವಿರ ಕಷ್ಟನಷ್ಟ ಭೀಕರ

ಕೆಚ್ಚಿನಿಂದ ಎದುರಿಸಿ ಧ್ಯೇಯದೀಪ ಬೆಳಗಿಸಿ

ಮುಂದೆ ನಡೆವ ಛಲವಿದೆ ಗೆಲುವು ಪಡೆವ ಬಲವಿದೆ ||೨||


ನಾಡಗುಡಿಯ ಕಟ್ಟಲು ಭರದಿ ಗುರಿಯ ಮುಟ್ಟಲು

ನಮ್ಮ ಕಾಯ ಮೀಸಲು ಜನರ ನೋವನಳಿಸಲು

ದಹಿಸಿ ದ್ವೇಷದ ಹಗೆ ಬಿತ್ತಿ ಸ್ನೇಹದ ನಗೆ ||೩||

***

namisi BAratamAtege dhumuki kAryakShEtrake

tyajisi BIti aMjike calisi muMde muMdake

jai BArati, jai BArati, jai BArati namO jagada sArathi ||pa||


SUravIradhIraru sAdhusaMtayatigaLu

tOridaMtha dAriyu sAridhaMtha nItiyu

namage mArgadarSaka satatasphUrtidAyaka ||1||


barali vighna sAvira kaShTanaShTa bhIkara

kecciniMda edurisi dhyEyadIpa beLagisi

muMde naDeva Calavide geluvu paDeva balavide ||2||


nADaguDiya kaTTalu Baradi guriya muTTalu

namma kAya mIsalu janara nOvanaLisalu

dahisi dvEShada hage bitti snEhada nage ||3||

***