Showing posts with label ಪಾಲಿಸಬೇಕಯ್ಯ ಪವಮಾನ ದೂತಾ sirigurutandevarada vittala. Show all posts
Showing posts with label ಪಾಲಿಸಬೇಕಯ್ಯ ಪವಮಾನ ದೂತಾ sirigurutandevarada vittala. Show all posts

Friday, 6 August 2021

ಪಾಲಿಸಬೇಕಯ್ಯ ಪವಮಾನ ದೂತಾ ankita sirigurutandevarada vittala

 ..

Kruti by ಸಿರಿಗುರುತಂದೆವರದವಿಠಲರು sirigurutandevarada vittala 


ಪಾಲಿಸಬೇಕಯ್ಯ ಪವಮಾನ ದೂತಾ ಪ.


ಬಾಲಕನು ಮಾಡಿರುವ ಅಪರಾಧವೆಣಿಸದೆಲೆ ಅ.ಪ.


ಇಷ್ಟು ದಿನಗಳವರೆಗೆ ದುಷ್ಟ ಜನರ ಸಹವಾಸದಿಕಟ್ಟಿ ಕಳೆದೆನೊ ಕಾಲ ಶಿಷ್ಟರೊಡೆಯಮುಟ್ಟಿ ಭಜಿಸುವ ನಿನ್ನ ಘಟ್ಟಿ ಜ್ಞಾನಮೃತವಕೊಟ್ಟು ಸಲಹಲಿ ಬೇಕು ದಿಟ್ಟ ಪುರುಷ 1


ಮಧ್ವ ದಾಸರೊಳ್ ನಿಂದು ತಾರತಮ್ಯ ಪಂಚಭೇದಪದ್ಧತಿಗಳನುಸರಿಸಿ ತಿದ್ದಿ ತಿಳುಹಿದೆಯೋ ಶ್ರೀಮಧ್ವರಾಯರೇ ಜಗಕೆಲ್ಲ ಗುರುವೆಂಬಶ್ರದ್ಧೆಯನು ಪುಟ್ಟಿಸಿದೋ ಶೇಷಪದ ಯೋಗ್ಯ 2


ಮಂದಮತಿಯೆಂದು ನಾ ನಿಂದ್ಯ ಮಾಡದೆ ಮನಮಂದಿರದಿ ಛಂದದಲಿ ಪೊಳೆಯಬೇಕುಮಂದರೋದ್ಧರನ ಪದ ಕುಂದದಲೆ ಭಜಿಸುವಸಿಂಧುಶಯನ ತಂದೆವರದವಿಠಲದಾಸ 3

***