Showing posts with label ತೋರೆನಗೆ ಶ್ರೀ ಕೃಷ್ಣ ತೋಯಜಾಂಬಕ ನಿನ್ನ gopalakrishna vittala. Show all posts
Showing posts with label ತೋರೆನಗೆ ಶ್ರೀ ಕೃಷ್ಣ ತೋಯಜಾಂಬಕ ನಿನ್ನ gopalakrishna vittala. Show all posts

Monday, 2 August 2021

ತೋರೆನಗೆ ಶ್ರೀ ಕೃಷ್ಣ ತೋಯಜಾಂಬಕ ನಿನ್ನ ankita gopalakrishna vittala

ತೋರೆನಗೆ ಶ್ರೀ ಕೃಷ್ಣ ತೋಯಜಾಂಬಕ ನಿನ್ನ

ಶ್ರೀ ರಮೇಶನೆ ನಾನಾ ಗುಣನಾಮ ಮಾಲೆ ಪ.


ವಾರಿಜಾಂಬಕನೆ ಶ್ರೀ ಗುರುಗಳ ರಚಿಸುತಲಿ

ಹಾರಹಾಕಿಹರೊ ನಿನಗೆ ಹರಿಯೆ ಅ.ಪ.

ಮುದ್ದು ಮೋಹನದಾಸರಿಂದಲಿ ತಂದೆ ಮುದ್ದು

ಮೋಹನವಿಠ್ಠಲನೆಂಬಾ

ಮುದ್ದಾದ ಅಂಕಿತವ ಶ್ರದ್ಧೆಯಿಂದ ಪಡೆದು

ಒದ್ದು ತಾಪತ್ರಯವನು

ಮಧ್ವಮತಸಾರಗಳ ಸಂಗ್ರಹಿಸಿ ಸುಜನರಿಗೆ

ತಿದ್ದಿ ತಿಳಿಸುತಲಿ e್ಞÁನ

ಬದ್ಧ ಜೀವರ ಕರ್ಮ ಕಳೆಯುತಲಿ ನಿನ್ನ ನಾಮ

ತಿದ್ದಿ ತಿಳಿಸಿದ ಗುರುಗಳು ಇವರು 1

ಸರ್ವೋತ್ತಮನೆ ನಾಗಶಯನ ಗಂಗಾಜನಕೆ

ಇಂದಿರಾಪತಿ ರಂಗನಾಥ

ಶರ್ವಾದಿವಂದ್ಯ ಕೃಪಾಸಾಂದ್ರ ದಶರಥರಾಮ

ರಘುರಾಮ ಇಂದಿರೇಶ

ಸರ್ವಾಧಿಪತಿಯೆ ಶ್ರೀ ಗೋಪಾಲಕೃಷ್ಣನೇ

ದಯಾಪೂರ್ಣ ಸೀತಾಪತೇ

ಸರ್ವೇಶ ಗುಣಭರಿತ ದಯಾಸಾಂದ್ರ ರಮಾಕಾಂತ

ವೇದೇಶ ಯಾದವೇಂದ್ರ ಸ್ವಾಮಿ 2

ಸದಾನಂದ ಗುಣಭರಿತ ದಯಾ ಪಯೋನಿಧಿಯೆ

ಇಂದಿರಾರಮಣ ಜಯ ಗೋಪಾಲನೆ

ಚಿದಾನಂದ ಜಯರಾಮ ಶ್ರೀಪತಿ ಮೋಹನ

ವರದೇಶ ಪ್ರಾಣನಾಥಾ

ಭೂದೇವಿಪತಿ ಪದ್ಮನಾಭ ಆನಂದಪೂರ್ಣ

ಶ್ರೀನಾಥ ಜಗದೀಶನೆ

ಸುಧಾಪ್ರಿಯ ಸಿರಿರಾಮ ರಂಗೇಶ ಜಗದ್ಭರಿತ

ವರದ ಮೋಹನದೇವಾ 3

ವರಗುರು ಗೋಪಾಲ ಪತಿತ ಪಾವನ ಸ್ವಾಮಿ

ಶ್ರೀಕಾಂತ ಪುರುಷೋತ್ತಮ

ಸಿರಿರಾಮಕೃಷ್ಣ ಹೃಷಿಕೇಶ ನಿತ್ಯಾನಂದ

ಪರಮಾನಂದ ಶ್ರೀ ಸುರೇಂದ್ರ

ಸಿರಿಗೋವಿಂದ ಮಧ್ವಮುನಿವರದ ಜಯಾರಮಣ

ಕರುಣಾಕರ ವೆಂಕಟ

ಕರುಣಾಕರ ರಾಮ ಜಯಾಪತಿಯೆ ಲಕ್ಷ್ಮೀರಮಣ

ದಯಾಮಯನೆ ಭವತಾರಕ ಹರಿಯೆ 4

e್ಞÁನಾನಂದ ಶುಭಗುಣಭರಿತ ಮೋಹನನೆ

ವಸುದೇವ ಪಾರ್ಥಸಾರಥಿಯೆ

ಪ್ರಾಣಪ್ರಿಯ ಪರಿಪೂರ್ಣ ಮಧ್ವವಲ್ಲಭಮುಕ್ತಿ

ದಾಯಕ ಸತ್ಯೇಶನೆ

e್ಞÁನಪೂರ್ಣ ಕಾಮಿತಾರ್ಥ ರಘುನಂದನ

ಪರಮಪಾವನ ರಮೇಶ ಕರುಣಾನಿಧೆ

ಸಿರಿನಿಧಿ ಸುಖಪೂರ್ಣ ಲೋಕೇಶ ಶ್ರೀ ಲೋಲ

ರಮಾಧವನೆ ಪುಂಡರೀಕಾಕ್ಷ ಸ್ವಾಮಿ 5

ಕಲ್ಯಾಣಗುಣಪೂರ್ಣ ಚಂದ್ರಹಾಸವರದ ಮಾಯಾಪತಿ

ಉಪೇಂದ್ರ ಚಕ್ರಪಾಣಿ

ನೀಲಾಪತಿಯೆ ದಯಾಕರನೆ ಗರುಡಧ್ವಜ ಧೃವವರದ

ಮುಕ್ತೇಶ ಬದರಿನಾಥಾ

ಬಾಲಕೃಷ್ಣನಂದ ಸುಖತೀರ್ಥವರದನೆ ನಿರ್ಮಲಾತ್ಮಕ

ಜಯಪ್ರದ ನಿರ್ಜರೇಶ

ಪ್ರಹ್ಲಾದವರದ ಮಧುರಾನಿಲಯ ರಾಧಾಪ್ರಿಯ

ಜಾನಕೀಪತಿ ವಿಶ್ವನಾಥಾ ಸ್ವಾಮಿ 6

ಮುಕ್ತಾಶ್ರಯನೆ ಚಿನ್ಮಯ ಉರಗಾದ್ರಿವಾಸನೆ

ಭುವನೇಶ ಗಜರಾಜವರದ

ಭಕ್ತಪ್ರಿಯ ದಾಶರಥಿಯೆ ಸೀತಾಕಾಂತ ಶ್ರೀಧರ

ಜನಾರ್ಧನ ಮಧ್ವನಾಥ

ರುಕ್ಮಿಣೀಶ ಪುಂಡರೀನಾಥ ಕಮಲಾಕ್ಷ ಹಯಗ್ರೀವ

ಆನಂದ ಅರವಿಂದಾಕ್ಷ

ಲಕ್ಷ್ಮೀಕಾಂತ ಅಮರೇಶ ರಮಾಕಾಂತ ಸುರವರೇಶ

ಪುಂಡರೀಕವರದ ಶ್ರೀ ಕೃಷ್ಣಸ್ವಾಮಿ 7

ಮಧ್ವೇಶ ಮಾಧವ ಗಾನಲೋಲ ಗಂಗಾಪಿತ

ಕಮಲಾನಾಥ ಕಮಲನಾಭ

ಮಧ್ವರಮಣ ಮುರಳಿಲೋಲ ಶೇಷಾದ್ರೀಶ

ಸದಮಲಾನಂದ ವೈಕುಂಠವಾಸ

ಮಧುರಾನಾಥ ರಮಾವಲ್ಲಭ ಮಾಯಾವರ

ಪದ್ಮೇಶ ಗುರು ಮಧ್ವೇಶ

ಪದ್ಮಾವತಿಪ್ರಿಯ ಲಕುವಿೂಶ ಸತ್ಯೇಶ ಸಿರಿನಾಥ

ಇಂದಿರಾಪತಿ ರಮೇಶ ಶ್ರೀಶÀ 8

ಸರಸಿಜಾಕ್ಷನೆ ನಿಗಮ ಗೋಚರ ರಮಾನಂದ

ಸಿರಿರಮಣ ಕಮಲಾಕಾಂತನೆ

ವರನಾಮರತ್ನಗಳ ಹುಡುಕಿ ವಿಠಲನೆ ನಿನಗೆ

ಸರವ ಪೋಣಿಸಿ ಹಾಕುತ

ಸುರಸಿ ಆನಂದಬಾಷ್ಪವ ಸುಖಪಡುತಿಹರು

ಪರಮ ಪ್ರಿಯ ಶ್ರೀ ಗುರುಗಳು

ಗುರುರಮಣ ಗೋಪಾಲಕೃಷ್ಣವಿಠಲ ಇನ್ನು ಅರಿಯೆನೊ

ಉಳಿದ ನಾಮಾ ಪೊರೆಯೋ 9

****