ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ಸದ್ಗುರುದಯವೆ ತಾ ನಿಜ ನೇಮ Pರಿಗಿದೇವೆ ಹಿತಗುಜ ಸಮಸ್ತ ಜನರಿಗಿದೆ ಸುಬೀಜ ಪ್ರೇಮವಿಟ್ಟವರಿಗ್ಹೊಳೆವದು ಸಹಜ 1
ಉಪಾಸನೆ ಎಲ್ಲಕೆ ಮೇಲು ಸುರಜನರಿಗಿದೊಂದೇ ಕೀಲು ಅರಿತವರಿಗೆ ಮುಕ್ತಿ ಬಾಗಿಲು ತ್ಯರ ತಿಳಿಯದವರಿಗಿದೇ ಸೋಲು 2
ನಂಬಿ ನಡೆಯಬೇಕು ಸದ್ಗುರುಪಾದ ಇಂದುದೋರಿಕೊಡುವದು ಸುಬೋಧ ಗುಂಭಗುರುತಾಗಿದೋರುದು ಸ್ವಾದ ಹಂಬಲಿಸಿಕೊಳಬೇಕು ಸುಪ್ರಸಾದ 3
ಗುರುಮಾರ್ಗವೆಂಬುದೆ ಸಾಕ್ಷಾತ್ಕಾರ ಸೂರೆಗೊಂಡು ಮ್ಯಾಲೆ ಸುಖಸಾಗರ ಮರುಳ ಬಲ್ಲವೇನಿದರ ವಿಚಾರ ಶರಣಜನರಿಗಿದೇ ಸಹಕಾರ 4
ಗುರುಕೃಪೆಯಾದವಗೆ ಪ್ರಾಂಜಳ ಸಾರಾಯ ಕೊಂಬುವನೆ ತಾ ವಿರಳ ಅರಿಯೋ ಮಹಿಪತಿ ನಿನ್ನೊಳು ಸಕಳ ಹರುಷವಾಗೆದಿಂತು ಈ ಸುಖಕಲ್ಲೋಳ 5
***