Showing posts with label ಶೋಭಾನ ಶೋಭಾನವೆ ಭೂದೇವಿಯರಸ ವೆಂಕಟರಾಯಗೆ purandara vittala SHOBHAANA SHOBHAANAVE BHUDEVIYARASA VENKATARAYAGE. Show all posts
Showing posts with label ಶೋಭಾನ ಶೋಭಾನವೆ ಭೂದೇವಿಯರಸ ವೆಂಕಟರಾಯಗೆ purandara vittala SHOBHAANA SHOBHAANAVE BHUDEVIYARASA VENKATARAYAGE. Show all posts

Sunday, 7 November 2021

ಶೋಭಾನ ಶೋಭಾನವೆ ಭೂದೇವಿಯರಸ ವೆಂಕಟರಾಯಗೆ purandara vittala SHOBHAANA SHOBHAANAVE BHUDEVIYARASA VENKATARAYAGE



ಶೋಭಾನ ಶೋಭಾನವೆ ||ಪ||

ಭೂದೇವಿಯರಸ ವೆಂಕಟರಾಯಗೆ
ಶೋಭಾನ ಶೋಭಾನವೆ ||

ಅಂದು ಕ್ಷೀರಾಂಬುನಿಧಿ ಮೊದಲಾಗಿ
ಇಂದಿರೆ ಹರುಷದಿಂದುದಿಸಿ ಬಂದು
ಕಂದರ್ಪ ಕೋಟಿ ಲಾವಣ್ಯಮೂರುತಿಯಾದ
ಮಂದಾರಮಾಲೆಯ ಹಾಕಿದ ದೇವಗೆ ||

ಜನಕನ ಮನೆಯಲ್ಲಿ ರಾಜಾಧಿರಾಜರು
ಎಣಿಕೆಯಿಲ್ಲದಲೆ ಬರುತಿರಲು
ಸನಕಾದಿವಂದ್ಯನ ಕಂಡು ಸಂತೋಷದಿ
ಜಾನಕಿ ಮಾಲೆಯ ಹಾಕಿದ ರಾಮಗೆ ||

ರುಕುಮನು ಶಿಶುಪಾಲಗನುಜೆಯೀಯುವನೆಂದು
ಸಕಲರಾಯರಲ್ಲಿ ಬಂದಿರಲಾಗಿ
ಭಕುತವತ್ಸಲನನ್ನು ಕಂಡು ಸಂತೋಷದಿ
ರುಕುಮಿಣಿ ಮಾಲೆಯ ಹಾಕಿದ ಕೃಷ್ಣಗೆ ||

ಸತ್ಯಭಾಮೆಯು ನೀಲೆ ಭದ್ರೆ ಕಾಳಿಂದಿಯು
ಮಿತ್ರವಿಂದೆಯು ಲಕ್ಷಣೆಯು ಜಾಂಬವತಿ
ಮತ್ತೆ ಆ ಸೋಳಸಾಹಸ್ರಕನ್ನಿಕೆಯರ
ಪ್ರತ್ಯಕ್ಷವಾಳಿದ ಕಲ್ಯಾಣನಿಗೆ ||

ಪದುಮದೇಶದಲೊಬ್ಬ ದೇವಾಂಗನೆಯ
ಪದುಮಮುಖಿ ಶ್ರುತಿಹೃತಿಯ
ಪದುಮನಾಭ ಪುರಂದರವಿಠಲಗೆ
ಪದುಮಾವತಿಪ್ರಿಯ ಶ್ರೀನಿವಾಸಗೆ ||
****

ರಾಗ ಸೌರಾಷ್ಟ್ರ ಅಟತಾಳ (raga, taala may differ in audio)

SOBAna SOBAnave ||pa||

BUdEviyarasa venkaTarAyage
SOBAna SOBAnave ||a.pa||

andu kShIrAMbunidhi modalAgi
indire haruShadindudisi bandu
kandarpa kOTi lAvaNyamUrutiyAda
mandAramAleya hAkida dEvage ||1||

janakana maneyalli rAjAdhirAjaru
eNikeyilladale barutiralu
sanakAdivandyana kanDu santOShadi
jAnaki mAleya hAkida rAmage ||2||

rukumanu SiSupAlaganujeyIyuvanendu
sakalarAyaralli bandiralAgi
Bakutavatsalanannu kanDu santOShadi
rukumiNi mAleya hAkida kRuShNage ||3||

satyaBAmeyu nIle Badre kALindiyu
mitraviMdeyu lakShaNeyu jAMbavati
matte A sOLasAhasrakannikeyara
pratyakShavALida kalyANanige ||4||

padumadESadalobba dEvAnganeya
padumamuKi SrutihRutiya
padumanABa purandaraviThalage
padumAvatipriya SrInivAsage ||5||
***

pallavi

shObhAna shObhAnave

anupallavi

bhUdEviyarasa vEnkaTarAyage shObhAna shObhnave

caraNam 1

andu kSIrAmbunidhi modalAgi indire haruSadindudisi bandu
kandarpa kOTi lAvaNya mUrutiyAda mandAra mAleya hAkida dEvage

caraNam 2

janakana maneyalli rAjAdi rAjaru eNikeyilladale barutiralu
sanakAdi vandyana kaNDu santOSadi jAnaki mAleya hAkida rAmage

caraNam 3

rukumanu shishupAlakanu jeyIyuvanendu sakala rAyaralli bandiralAgi
bhakuta vatsalanannu kaNDu kaNDu santOSadi rukumiNi mAleya hAkida krSNage

caraNam 4

satyabhAmeyu nIle bhadre kALindiyu mitravindeyu lakSaNeyu jAmbavati
matte A sOLa sAhasra kannikeyara pratyakSavALida kalyANanige

caraNam 5

paduma dEshadalobba dEvAnganeya padumamukhi shruti hrtiya
padumanAbha purandara viTtalage padumAvati priya shrInivAsage
***

shobhana by purandara dasa
ಶೋಭಾನ ಶೋಭಾನವೆ ||pa||

ಭೂದೇವಿಯರಸ ವೆಂಕಟರಾಯಗೆ
ಶೋಭಾನ ಶೋಭಾನವೆ ||a.pa||

ಅಂದು ಕ್ಷೀರಾಂಬುನಿಧಿ ಮೊದಲಾಗಿ
ಇಂದಿರೆ ಹರುಷದಿಂದುದಿಸಿ ಬಂದು
ಕಂದರ್ಪ ಕೋಟಿ ಲಾವಣ್ಯಮೂರುತಿಯಾದ
ಮಂದಾರಮಾಲೆಯ ಹಾಕಿದ ದೇವಗೆ ||1||

ಜನಕನ ಮನೆಯಲ್ಲಿ ರಾಜಾಧಿರಾಜರು
ಎಣಿಕೆಯಿಲ್ಲದಲೆ ಬರುತಿರಲು
ಸನಕಾದಿವಂದ್ಯನ ಕಂಡು ಸಂತೋಷದಿ
ಜಾನಕಿ ಮಾಲೆಯ ಹಾಕಿದ ರಾಮಗೆ ||2||

ರುಕುಮನು ಶಿಶುಪಾಲಗನುಜೆಯೀಯುವನೆಂದು
ಸಕಲರಾಯರಲ್ಲಿ ಬಂದಿರಲಾಗಿ
ಭಕುತವತ್ಸಲನನ್ನು ಕಂಡು ಸಂತೋಷದಿ
ರುಕುಮಿಣಿ ಮಾಲೆಯ ಹಾಕಿದ ಕೃಷ್ಣಗೆ ||3||

ಸತ್ಯಭಾಮೆಯು ನೀಲೆ ಭದ್ರೆ ಕಾಳಿಂದಿಯು
ಮಿತ್ರವಿಂದೆಯು ಲಕ್ಷಣೆಯು ಜಾಂಬವತಿ
ಮತ್ತೆ ಆ ಸೋಳಸಾಹಸ್ರಕನ್ನಿಕೆಯರ
ಪ್ರತ್ಯಕ್ಷವಾಳಿದ ಕಲ್ಯಾಣನಿಗೆ ||4||

ಪದುಮದೇಶದಲೊಬ್ಬ ದೇವಾಂಗನೆಯ
ಪದುಮಮುಖಿ ಶ್ರುತಿಹೃತಿಯ
ಪದುಮನಾಭ ಪುರಂದರವಿಠಲಗೆ
ಪದುಮಾವತಿಪ್ರಿಯ ಶ್ರೀನಿವಾಸಗೆ ||5||
*******

ಪುರಂದರದಾಸರು

ಶೋಭನ ಶೋಭನವೆ ನಮ್ಮಶ್ರೀ ಭೂದೇವಿಯರ ಅರಸು ವೆಂಕಟಗೆ ಪ.

ಅಂದು ಕ್ಷೀರಾಂಬುಧಿಯನ್ನು ಮಥಿಸಲಾಗಇಂದಿರೆ ಹರುಷದಿಂದುದಿಸಿ ಬಂದು ||ಮಂದಾರ ಮಾಲೆಯ ಹಾಕಿದ ದೇವಗೆಕಂದರ್ಪಕೋಟಿ ಲಾವಣ್ಯ ಮೂರುತಿಗೆ 1

ಜನಕನ ಮನೆಯಲ್ಲಿ ರಾಜಾಧಿರಾಜರುಎಣಿಕೆಯಿಲ್ಲದೆ ಬಂದಿರಲಾಗಿ ||ಸನಕಾದಿವಂದ್ಯನ ಕಂಡು ಸಂತೋಷದಿಜನಕಜೆ ಮಾಲೆಯ ಹಾಕಿದ ರಾಮಗೆ 2

ರುಕುಮನು ಶಿಶುಪಾಲಗೀವೆನೆಂಬ ಮಾತಿಗೆಸಕಲ ರಾಯರು ಬಂದಿರಲಾಗಿ ||ಭಕುತಿ ವತ್ಸಲನ ಕಂಡು ಸಂತೋಷದಿರುಕುಮಿಣಿ ಮಾಲೆಯ ಹಾಕಿದ ಕೃಷ್ಣೆಗೆ 3

ಸತ್ಯಭಾಮೆ ನೀಳಾ ಭದ್ರಾ ಕಾಳಿಂದಿಯುಮಿತ್ರವಿಂದಾ ಲಕ್ಷಣಾ ಜಾಂಬವತಿ ||ಮತ್ತೆ ಸೋಳಾಸಾಸಿರ ಗೋಪಿಕೆಯರಪ್ರತ್ಯಕ್ಷವಾಳಿದ ಕಲ್ಯಾಣಗೆ 4

ಪದ್ಮದೇಶದಲೊಬ್ಬ ದೇವಾಂಗನೆಯುಪದ್ಮಮುಖಿಯು ಶ್ರುತಕೀರ್ತಿಯಾಗಿ ||ಪದ್ಮನಾಭ ಶ್ರೀ ಪುರಂದರವಿಠಲಗೆಪದ್ಮಾವತೀ ಪ್ರಿಯ ಶ್ರೀನಿವಾಸಗೆ 5
****