ಪುರಂದರದಾಸರು
ರಾಗ ಮೋಹನ ಅಟತಾಳ
ವಿಷಯದ ವಿಚಾರ ಬಿಡು, ವಿಹಿತ ಕರ್ಮವ ಮಾಡು
ವೈರಾಗ್ಯ ಭಾಗ್ಯ ಬೇಡು ||ಪ||
ವಿಷವೆಂದು ಕಾಮಕ್ರೋಧಗಳೆಲ್ಲನೀಡಾಡು
ಮಸಣ ಮನವೇ ಮಾಧವನ್ನ ಕೊಂಡಾಡು ||ಅ||
ಅನುದಿನವು ಹರಿಕಥೆಯ ಕೇಳಿ ಸಂತೋಷಪಡು
ವಿನಯದಿ ಸಜ್ಜನರ ಕೂಡು
ಮನಮುಟ್ಟಿ ದುರಾಚರ ಮಾಳ್ಪರನು ನೀ ಕಾಡು
ಹಣ ಹೊನ್ನು ಪರಹೆಣ್ಣು ಹೆಂಚೆಂದು ನೋಡು ||
ವೇದ ಶಾಸ್ತ್ರಾರ್ಥ ತತ್ವದ ವಿಚಾರವ ಮಾಡು
ಮಾಧವನ ಭಕ್ತಿ ಬೇಡು
ಪಾದದಿಂದಲಿ ತೀರ್ಥ ಯಾತ್ರೆಗಳ ನೀ ಮಾಡು
ಖೇದಪಡದನುದಿನದಿ ಸಂತೋಷ ಕೂಡು ||
ನಂಬದಿರು ಈ ದೇಹ ಅಂಬುಗುಳ್ಳೆಯಂತೆ
ನಂಬಿ ನೀ ಕೆಡಲು ಬೇಡ
ಕೊಂಬುವರು ಬಂದರೆ ಕೊಡರೊಂದು ರುವ್ವಿಯನು
ಅಂಬುಜಾಕ್ಷ ಶ್ರೀ ಪುರಂದರವಿಠಲನ್ನ ನೆನೆ ಮನವೆ ||
***

pallavi
viSayada vicAra biDu vihita karmava mADu vairAgya bhAgya bEDu
anupallavi
viSavendu kAma krOdhagaLella nIDATu masaNa manavE mAdhavanna koNDADu
caraNam 1
anudinavu harikatheya kELi santOSa paDu vinayadi sajjanara kUDu
manamuTTi durAcara mALparanu nI kADu haNa honnu para heNNu hencendu nODu
caraNam 2
vEda shAstrArtta tatvada vicArava mADu mAdhavana bhakti bEDu
pAdadindali tIrtta yAtregaLa nI mADu khEdapaDadnu dinadi santOSa kUDu
caraNam 3
nambadiru I dEha ambuguLLeyante nambi nI keDalu bEDa kombuvaru bandare
koDaronduruvviyanu ambujAkSa shrI purandara viTTalanna nene manave
***
ವಿಷಯದ ವಿಚಾರ ಬಿಡು ವಿಹಿತ ಕರ್ಮವ ಮಾಡು|
ವೈರಾಗ್ಯ ಭಾಗ್ಯಬೇಡು ಪ.
ವಿಷವೆಂದು ಕಾಮ - ಕ್ರೋಧಗಳೆಲ್ಲವೀಡಾಡು |ಮಸಣಮನವೇ ಮಾಧವನನು ಕೊಂಡಾಡು ಅಪ
ಅನುದಿನದಿ ಹರಿಕಥೆಯಕೇಳಿ ಸಂತೋಷಪಡು |ದಿನದಿನವು ಸಜ್ಜನರ ಕೂಡು ||ಮನಮುಟ್ಟಿ ದುರಾಚಾರ ಮಾಳ್ಪರನು ನೀ ಕಾಡು |ಹಣ - ಹೊನ್ನು ಪರಹೆಣ್ಣು ಹೆಂಟೆಯಂತೆನೋಡು1
ವೇದ ಶಾಸ್ತ್ರಾರ್ಥ ತತ್ವದ ವಿಚಾರವಮಾಡು |ಮಾಧವನ ಭಕ್ತಿ ಬೇಡು ||ಪಾದದಲಿ ಪುಣ್ಯತೀರ್ಥದ ಯಾತ್ರೆಮಾಡು ಮಧು - |ಸೂದನನ ಕೀರ್ತಿ ಸಂಕಿರ್ತನೆಯಮಾಡು2
ಅಂಬುಗುಳ್ಳಗಳಂತೆ ಎಂದಿಗಿದ್ದರು ದೇಹ |ನಂಬಿ ನೀ ಕೆಡಲುಬೇಡ ||ಕೊಂಬುವರು ಬಂದರಾಕ್ಷಣಕೆ ಬೆಲೆಯಾಗುವುದು |ಅಂಬುಜಾಕ್ಷ ಪುರಂದರವಿಠಲನ ನೆನೆ ಮನವೆ 3
*******