Showing posts with label ನೆಚ್ಚಿಕೆಯಿಲ್ಲದ ದೇಹ ನಂಬಬೇಡಿರೊ prasannavenkata. Show all posts
Showing posts with label ನೆಚ್ಚಿಕೆಯಿಲ್ಲದ ದೇಹ ನಂಬಬೇಡಿರೊ prasannavenkata. Show all posts

Wednesday, 13 November 2019

ನೆಚ್ಚಿಕೆಯಿಲ್ಲದ ದೇಹ ನಂಬಬೇಡಿರೊ ankita prasannavenkata

by ಪ್ರಸನ್ನವೆಂಕಟದಾಸರು
ನೆಚ್ಚಿಕೆಯಿಲ್ಲದ ದೇಹ ನಂಬಬೇಡಿರೊ ಗಡಅಚ್ಯುತಾನಂತನ ಪಾದದಿಂಬು ಬೇಡಿರೊ ಪ.

ದಿನಪನುದಯದಲೆದ್ದು ನಿತ್ಯಕರ್ಮವಜರಿದುದೀನ ವೃತ್ತಿಯಲಿ ಧನವನೊದಗಿಸಿದಿರೊವಿನಯವಿಲ್ಲದೆ ವೈವಸ್ವತನ ಭಟರೊಯ್ವಾಗಮನಸಿನ ಹವಣು ಸಂಗಡ ಬಾಹದೆ 1

ಅರಿಯಾರು ವರ್ಗಾಳಿಗೊಳಗಾಗಿ ಸತಿಸುತರಪರಕಿಂದಧಿಕರೆಂದು ಬಗೆವರೇನೊಕರುಣವಿಲ್ಲದೆ ಯಾತನೆಗೆ ಪೊಗಿಸಿ ಬಡಿವಾಗತರುಣಿ ಸಂಪದವಾಗ ಸಹಾಯವಾಹದೆ 2

ಮುನ್ನೇಸು ಜನ್ಮಗಳ ವೃಥಾ ಕಳೆದೆಯಲ್ಲದೆ ಪ್ರಸನ್ನವೆಂಕಟನ ಪದವಿಡಿಯಲಿಲ್ಲಚೆನ್ನಾಗಿ ಮರುತಮತವಿಡಿದು ನಡೆದರೆ ನಿಮ್ಮಮನ್ನಿಸಿ ಗತಿಗೊಡದಿಹನೆ ರಂಗ ನೋಡಿ 3
********