Showing posts with label ಉದಯಕಾಲದೊಳೆದ್ದು ಗೋಪಿಯು ದಧಿಯ ಮಥಿಸುವ ಎಂಬ ಸಮಯದಿ shreeda vittala. Show all posts
Showing posts with label ಉದಯಕಾಲದೊಳೆದ್ದು ಗೋಪಿಯು ದಧಿಯ ಮಥಿಸುವ ಎಂಬ ಸಮಯದಿ shreeda vittala. Show all posts

Sunday, 1 August 2021

ಉದಯಕಾಲದೊಳೆದ್ದು ಗೋಪಿಯು ದಧಿಯ ಮಥಿಸುವ ಎಂಬ ಸಮಯದಿ ankita shreeda vittala

 ..

kruti by Srida Vittala Dasaru  Karjagi Dasappa


ಉದಯಕಾಲದೊಳೆದ್ದು ಗೋಪಿಯು

ದಧಿಯ ಮಥಿಸುವ ಎಂಬ ಸಮಯದಿ

ಉದರಗಣ್ಣನು ಎದ್ದು ತೊಟ್ಟಿಲೊಳ್

ತೊದಲು ನುಡಿಗಳಿಂ ಕರೆದ ತಾಯಿಯ 1


ನುಡಿಯ ಲಾಲಿಸಿ ನಳಿನನೇತ್ರನು

ಕರೆದ ಹಾಲನು ಕೊಡುವೆನೆಂದರೆ

ಕೊಡುವೆನೆಂದರೆ ಕಣ್ಣಮುಚ್ಚನು

ಒಡನೆ ಮಲಗುವ ಮಲಗದೇಳುವ 2


ನಿದ್ರೆ ತೀರದೆ ನೀ ಎದ್ದ ಕಾರಣ

ಬುದ್ಧಿ ಸಾಲದು ಮುದ್ದು ಮಗುವಿಗೆ

ಒದ್ದು ಕೆಲಸವ ತಿದ್ದಿ ಉನ್ಮತ

ಅಮ್ಮ ಬಾರೆಲೆ ಎನ್ನಗಲಬೇಡವೆ 3


ಗುಮ್ಮ ಬರುತದೆ ಗುಸುಗುಸೆನುತದೆ

ಶ್ರೀದವಿಠಲನಾ ಶ್ರೀಲತಾಂಗಿಯು

ಮೋದಪಡಿಸುವ ಮಾನವೀಯಳೇ

ವೇದಗೋಚರ ನೀ ಏಳಬೇಡವೋ

ಪಾದಕೆರಗುವೆ ಪವಡಿಸೆಂದಳು 4

***